ಅರಕಲಗೂಡು ತಾಲೂಕಿನಲ್ಲಿ ಹೊಲಕ್ಕೆ ಕೊಟ್ಟಿಗೆ ಗೊಬ್ಬರ ಸಾಗಿಸಿರುವ ರೈತರು ಭೂಮಿ ಉಳುಮೆ ಮಾಡದೆ ಬಿಟ್ಟಿರುವುದು. 
ಹಾಸನ

ಮಳೆಯಿಲ್ಲದೆ ಬಿತ್ತನೆ ಕಾರ್ಯಕ್ಕೆ ತೊಡಕು

ಅಭಿನಯ್ ಎಚ್.ಎಂ
ಅರಕಲಗೂಡು: ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯಕ್ಕೆ ತೊಡಕಾಗಿದು, ರೈತರಿಗೆ ಆರಂಭದಲ್ಲೇ ಆರ್ಥಿಕವಾಗಿ ನಷ್ಟ ಎದುರಿಸುವಂತಾಗಿದೆ.
ಮುಂಗಾರು ಪೂರ್ವ ಮಳೆಯೂ ಸರಿಯಾಗಿ ಬಿದ್ದಿಲ್ಲ. ಹಲವೆಡೆ ಅಲ್ಲಲ್ಲಿ ಬಿದ್ದ ಸಾಧಾರಣ ಮಳೆಗೆ ಕೃಷಿ ಭೂಮಿ ಉಳುಮೆ ನಡೆಸಿ ಗೊಬ್ಬರ ಸಾಗಿಸಿ ಬಿತ್ತನೆಗೆ ಸಿದ್ಧಗೊಳಿಸಿದ್ದಾರೆ. ದುರದೃಷ್ಟವಶಾತ್ ಸಕಾಲದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲು ಹದ ಮಳೆಯಾಗದ ಕಾರಣ ರೈತರನ್ನು ಚಿಂತೆಗೀಡು ಮಾಡಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿನಲ್ಲಿ 47,511 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು ಮಳೆಯಾಗದೆ ಕೇವಲ 760 ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆ ಮಾಡಲಾಗಿದೆ. ಇದರಿಂದಾಗಿ ಶೇ.1.60ರಷ್ಟು ಶೂನ್ಯ ಸಾಧನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 7006 ಹೆಕ್ಟೇರ್‌ನಲ್ಲಿ ಮತ್ತು ನೀರಾವರಿ ಪ್ರದೇಶದಲ್ಲಿ 285 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಿದ್ದು, ಶೂನ್ಯ ಸಾಧನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 20323 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತಬೇಕಿದ್ದು ಮಳೆಯಿಲ್ಲದೆ ಬಿತ್ತನೆ ಮಾಡಲಾಗಿಲ್ಲ. ಇನ್ನು ನೀರಾವರಿ ಆಶ್ರಯದಲ್ಲಿ 2200 ಹೆಕ್ಟೇರ್ ಬದಲಿಗೆ ಕೇವಲ 70 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. 39457 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ ಬೆಳೆಗಳ ಬಿತ್ತನೆ ಹೊಂದಿದ್ದು 70 ಹೆಕ್ಟೇರ್ ನಲ್ಲಷ್ಟೇ ಬಿತ್ತನೆಯಾಗಿದೆ. 10 ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆ ಮಾಡಬೇಕಿದ್ದು ಶೂನ್ಯ ಸಾಧನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 2628 ಹೆಕ್ಟೇರ್‌ನಲ್ಲಿ ಅಲಸಂದೆ ಗುರಿ ಹೊಂದಿದ್ದು 130 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ 137 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಬೇಕಿದ್ದು ಶೂನ್ಯ ಸಾಧನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 50 ಹೆಕ್ಟೇ ನಲ್ಲಿ ತೊಗರಿ ಹಾಗೂ ತಲಾ 75 ಹೆಕ್ಟೇರ್‌ನಲ್ಲಿ ಹುರುಳಿ ಮತ್ತು ಹೆಸರು ಬಿತ್ತಬೇಕಿದ್ದು ಶೂನ್ಯ ಸಾಧನೆಯಾಗಿದೆ. ಒಟ್ಟು 2975 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬೆಳೆಗಳನ್ನು ಬಿತ್ತಬೇಕಿದ್ದು 130 ಹೆಕ್ಟೇರ್ ಕಡಿಮೆ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಲಾ 10 ಹೆಕ್ಟೇರ್‌ನಲ್ಲಿ ನೆಲಗಡಲೆ, ಎಣ್ಣೆಕಾಳು ಬಿತ್ತನೆ ಗುರಿ ಹೊಂದಿದ್ದು ಶೂನ್ಯ ಸಾಧನೆಯಾಗಿದೆ. 5069 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು 560 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಕಸಬಾ ಹೋಬಳಿಯ ಮಳೆಯಾಶ್ರಿತ ಪ್ರದೇಶದಲ್ಲಿ 1600 ಹೆಕ್ಟೇರ್ ಪ್ರದೇಶಮತ್ತು ನೀರಾವರಿ ಪ್ರದೇಶದಲ್ಲಿ 60 ಹೆಕ್ಟೇರ್ ರಾಗಿ ಬಿತ್ತನೆ ಗುರಿ ಹೊಂದಿದ್ದು ಮಳೆ ಇಲ್ಲದೆ ಶೂನ್ಯ ಸಾಧನೆಯಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 5223 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, ನೀರಾವರಿ 540 ಹೆಕ್ಟೇರ್ ಗುರಿ ಹೊಂದಿದ್ದು ಕೇವಲ 15 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 9273 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಗುರಿ ಸಾಧನೆಗೆ ಕೇವಲ 15 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ 438 ಹೆಕ್ಟೇರ್ ಪ್ರದೇಶದಲ್ಲಿ ಆಲಸಚಿದೆ ಬಿತ್ತನೆ ಗುರಿ ಹೊಂದಿದ್ದು 20 ಹೆಕ್ಟೇ ನಲ್ಲಷ್ಟೇ ಬಿತ್ತಲಾಗಿದೆ. ಕಸಬಾ ಹೋಬಳಿಯಲ್ಲಿ ಒಟ್ಟು 9831 ಹೆಕ್ಟೇರ್ ಗುರಿ ಹೊಂದಿದ್ದು 50 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ದೊಡ್ಡಮಗ್ಗೆ ಹೋಬಳಿಯಲ್ಲಿ ಒಟ್ಟು 10330 ಹೆಕ್ಟೇರ್ ಗುರಿ ಹೊಂದಿದ್ದು 130 ಹೆಕ್ಟೇರ್‌ನಲ್ಲಿ ಬಿತ್ತನೆಚಿಾಗಿದೆ. ರಾಮನಾಥಪುರ ಹೋಬಳಿಯಲ್ಲಿ ಒಟ್ಟು 10,313 ಹೆಕ್ಟೇರ್ ಗುರಿ ಹೊಂದಿದ್ದು 295 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಕೊಣನೂರು ಹೋಬಳಿಯಲ್ಲಿ ಒಟ್ಟು 10,479 ಹೆಕ್ಟೇರ್ ಗುರಿ ಹೊಂದಿದ್ದು 215 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮಲ್ಲಿಪಟ್ಟಣ ಹೋಬಳಿಯಲ್ಲಿ ಒಟ್ಟು 6558 ಹೆಕ್ಟೇರ್ ಗುರಿ ಹೊಂದಿದ್ದು ಮಳೆಯಿಲ್ಲದೆ ಕೇವಲ 70 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಮಲ್ಲಿಪಟ್ಟಣ ಹೋಬಳಿಯಲ್ಲಿ ಮಳೆ ಕೊರತೆ ಪರಿಣಾಮ ಕಾಫಿ ಹೂ ಹೊಡೆಯಲು ತೊಡಕಾಗಿದ್ದು ಇದು ಇಳುವರಿ ಮೇಲೆ ಹೊಡೆತ ಬೀಳಲಿದೆ.
ವಾಡಿಕೆ ಮಳೆ ವಿವರ: ಪ್ರಸಕ್ತ ಜನವರಿ ತಿಂಗಳಿನಲ್ಲಿ 2.3 ಮಿಮೀ ವಾಡಿಕೆ ಮಳೆಯಾಗಬೇಕಿದ್ದು 1.1 ಮಿಮೀ ಬಿದ್ದಿದ್ದು 52ರಷ್ಟು ಕೊರತೆಯಾಗಿದೆ. ಫೆಬ್ರವರಿಉಲ್ಲಿ 2.7 ಮಿಮೀ ವಾಡಿಕೆ ಮಳೆ ಆಗಬೇಕಿದ್ದು 6.6 ಮಿಮೀ ಬಿದ್ದಿದ್ದು 144 ಮಿಮೀ ಅಧಿಕ ಮಳೆಯಾಗಿದೆ. ಮಾರ್ಚ್ ತಿಂಗಳಿನಲ್ಲಿ 13.6 ಮಿಮೀ ವಾಡಿಕೆ ಮಳೆಯಾಗಬೇಕಿದ್ದು 16.9 ಮಿಮೀ ಮಳೆಯಾಗಿದ್ದು 24ರಷ್ಟು ಹೆಚ್ಚು ಬಿದ್ದಿದೆ. ಏಪ್ರಿಲ್ ತಿಂಗಳಿನಲ್ಲಿ51.4 ಮಿಮೀ ವಾಡಿಕೆ ಮಳೆಯಾಗಬೇಕಿದ್ದು 19.8 ಮಿಮೀ ಮಳೆಯಾಗಿದ್ದು 61ರಷ್ಟು ಕಡಿಮೆಯಾಗಿದೆ. ಮೇ ತಿಂಗಳ ಮೊದಲ ವಾರದವರೆಗೆ ಒಟ್ಟು 90.3 ಮಿಮೀ ವಾಡಿಕೆ ಮಳೆ ಬೀಳಬೇಕಿದ್ದು 69.8 ಮಿಮೀ ಮಳೆಯಾಗಿದ್ದು 23ರಷ್ಟು ಕೊರತೆಯಾಗಿದ್ದು ವಿವಿಧ ಬೆಳೆಗಳ ಬಿತ್ತನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.