ಎಂಎಲ್ಸಿ ಸಿ.ಟಿ.ರವಿ ವ್ಯಂಗ್ಯ  
ಹಾಸನ

ಸಿಎಂ ಆಗಲಿದ್ದಾರೆ ವಾಟರ್‌ಮನ್!

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಸಿಎಂ ಆಗಲಿದ್ದಾರೆ ವಾಟರ್‌ಮನ್!
  • ಎಂಎಲ್ಸಿ ಸಿ.ಟಿ.ರವಿ ವ್ಯಂಗ್ಯ
ಹಾಸನ: ಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿಗೆ ಹರಿಸಿದರೆ ಹೇಳಿದಂತೆ ಕೆಲಸ ಮಾಡುವ ವಾಟರ್‌ಮನ್ ರೀತಿ ಆಗಲಿದ್ದಾರೆ ಎಂದು ಎಂಎಲ್‌ಸಿ ಸಿ.ಟಿ.ರವಿ ಛೇಡಿಸಿದರು.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ನಮ್ಮ ನೀರು, ನಮ್ಮ ಹಕ್ಕು ಎಂದು ಇದೇ ಡಿ.ಕೆ.ಶಿವಕುಮಾರ್ ಅವರು ಹಲವು ದಿನಗಳ ಕಾಲ ಪಾದಯಾತ್ರೆ ಮಾಡಿದ್ದರು. ಹಾಗಾಗಿ ಅವರು ಕರ್ನಾಟಕ ಹಾಗೂ ರೈತರು, ಜನಸಾಮಾನ್ಯರ ಹಿತ ಕಾಯಬೇಕೇ ಹೊರತು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀಡು ಹರಿಸಬಾರದು ಎಂದು ಆಗ್ರಹಿಸಿದರು.
ಇದೇ ವೇಳೆ ಯಾರು ಏನೇ ಷಡ್ಯಂತ್ರ ಮಾಡಿದರೂ, ಅಖಂಡ ಭಾರತ ದೇಶವನ್ನು ಪಾಕಿಸ್ತಾನ ಮಾಡುವ ಹುನ್ನಾರ ನನಸಾಗದು ಎಂದ ಸಿ.ಟಿ.ರವಿ, ಕಾಂಗ್ರೆಸ್ ಹಾಗೂ ಇತರರು ಪ್ರಧಾನಿ ಅವರನ್ನೂ ಟೀಕೆ ಮಾಡಬಹುದು. ಆದರೆ ನಾವು ರಾಹುಲ್‌ಗಾಂಧಿ, ಸೋನಿಯಾಗಾಂಧಿ ಅವರನ್ನು ಟೀಕೆ ಮಾಡಿದರೆ ಎಫ್‌ಐಆರ್ ದಾಖಲಾಗುತ್ತದೆ. ನೋಟಿಸ್ ಜಾರಿ ಮಾಡಲಾಗುತ್ತದೆ ಎಂದರು.