ಹಾಸನ ನಗರದ ಕುವೆಂಪು ರಸ್ತೆ ಬಳಿ ಇರುವ ಹಾಸನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಡಾ.ಪದ್ಮ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಎಚ್.ರಮೇಶ್, ಸಿ. ಶಿವಸ್ವಾಮಿ, ಚನ್ನೇಗೌಡ, ಎಚ್.ಆರ್. ಚಂದ್ರೇಗೌಡ, ಎಚ್.ಕೆ. ನಾಗೇಶ್ ಇತರರಿದ್ದರು. 
ಹಾಸನ

ಆರೋಗ್ಯಕರ ಜೀವನಕ್ಕೆ ನಡಿಗೆ ಅತ್ಯಗತ್ಯ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯಕರ ಜೀವನಕ್ಕೆ ನಡಿಗೆ ಅತ್ಯಗತ್ಯ
  • ವೈದ್ಯ ಡಾ.ಪದ್ಮ ಪ್ರಸಾದ್ ಹೇಳಿಕೆ ಚಿಂತನೆಗಳಿಂದ ದೂರವಿರುವುದೇ ಉತ್ತಮ ಮಾರ್ಗ
ಹಾಸನ: ಆರೋಗ್ಯಕರ ಜೀವನಕ್ಕೆ ಪರಿಣಾಮಕಾರಿ ಕ್ರಮಗಳನ್ನು ಪಾಲಿಸುವ ಅಗತ್ಯವಿದ್ದು, ಪ್ರತಿದಿನ ನಡೆಯುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ವೈದ್ಯ ಡಾ.ಪದ್ಮ ಪ್ರಸಾದ್ ಹೇಳಿದರು.
ನಗರದ ಕುವೆಂಪು ರಸ್ತೆ ಬಳಿ ಇರುವ ಹಾಸನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಿಪಿ ಹಾಗೂ ಶುಗರ್ ಸಮಸ್ಯೆ ಇರುವವರು ಪ್ರತಿನಿತ್ಯ ಕನಿಷ್ಠ ಅರ್ಧಗಂಟೆ ನಡೆಯಬೇಕು ಎಂದು ಸಲಹೆ ನೀಡಿದರು.
ಆಹಾರ ನಿಯಂತ್ರಣ ಅತ್ಯಂತ ಮುಖ್ಯವಾಗಿದ್ದು, ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು ಹಾಗೂ ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕು. ದಿನಕ್ಕೆ ಸುಮಾರು 14 ಸಾವಿರ ಹೆಜ್ಜೆ ನಡೆಯುವುದು ಉತ್ತಮ, ಅಂದರೆ ಕನಿಷ್ಠ ನಾಲ್ಕು ಕಿ.ಮೀ. ನಡೆಯುವ ಅಭ್ಯಾಸ ಆರೋಗ್ಯವನ್ನು ಕಾಪಾಡುತ್ತದೆ. ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು, ಅತಿಯಾದ ಚಿಂತನೆಗಳಿಂದ ದೂರವಿರುವುದೇ ಉತ್ತಮ ಜೀವನದ ಮಾರ್ಗ. ಉತ್ತಮ ನಿದ್ದೆ ಆಯುಷ್ಯವನ್ನು ಹೆಚ್ಚಿಸುತ್ತದೆ. ಊಟ ಮಾಡಿದ ತಕ್ಷಣ ಮಲಗಬಾರದು, ಸ್ವಲ್ಪ ಹೊತ್ತು ನಡೆಯುವ ಬಳಿಕ ವಿಶ್ರಾಂತಿ ಪಡೆಯಬೇಕು ಎಂದು ಎಚ್ಚರಿಸಿದರು.
ಉತ್ತಮ ಸ್ನೇಹ, ಸಕಾರಾತ್ಮಕ ವಿಚಾರಗಳು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವುದು ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ. ಇತ್ತೀಚೆಗೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಇತಿಹಾಸವಿದ್ದವರೂ ಮುಂಚಿತ ತಪಾಸಣೆ ಮಾಡಿಸಿಕೊಳ್ಳಬೇಕು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಟ್ಟುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಜೂನಿಯರ್ ಕಮಾಂಡರ್ ಅಧಿಕಾರಿ ಸಿ.ಕೆ.ಕಿರಣ್ ಕುಮಾರ್, ರಾಜು, ರುಕೇಶ್, ರಾಮಚಂದ್ರ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಎಸ್.ಐ.ಮಂಜಪ್ಪ, ಸಿ.ಬಿ. ನಾಗರಾಜು, ರಂಗೇಗೌಡ ಹಾಗೂ ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಗಿರೀಶ್, ಕಾಂಚನಾ ಮಾಲಾ, ವನಜಾ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ರಮೇಶ್, ಕಾರ್ಯದರ್ಶಿ ಸಿ.ಶಿವಸ್ವಾಮಿ, ಖಜಾಂಚಿ ಚನ್ನೇಗೌಡ, ಜಿಲ್ಲಾ ಸಂಪುಟ ಕಾರ್ಯದರ್ಶಿ ಎಚ್.ಆರ್. ಚಂದ್ರೇಗೌಡ, ವಲಯ ಅಧ್ಯಕ್ಷ ಎಚ್.ಕೆ.ನಾಗೇಶ್, ಮಾಜಿ ಅಧ್ಯಕ್ಷ ಐ.ಜಿ.ರಮೇಶ್, ಗಂಗಾಧರ್, ಮಲ್ಲೇಶ್ ಗೌಡ. ನಾಗರಾಜು ಇತರರು ಇದ್ದರು.