ಉರ್ದು ಅಕಾಡೆಮಿಯಿಂದ ಸಕಲೇಶಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಉರ್ದು ಕವಿಗೋಷ್ಠಿಯಲ್ಲಿ ಜಮೀಲ್ ಆಹಮ್ಮದ್ ಅವರನ್ನು ಸನ್ಮಾನಿಸಲಾಯಿತು. ಮೌಲನಾ ಮುಫ್ತಿ ಮಹಮ್ಮದ್ ಖಾಜಿ, ಅನ್ವರ್‌ಖಾನ್, ಡಾ.ಅಖ್ತರ್ ಸಯ್ಯದ್ ಖಾನಂ, ಸಯ್ಯದ್ ಸಜ್ಜದ್ ಪಾಷ ಇದ್ದರು. 
ಹಾಸನ

ಉರ್ದು ಜನಸಾಮಾನ್ಯರ ಭಾಷೆ

ಸಕಲೇಶಪುರ: ಉರ್ದು ಜನ ಸಾಮಾನ್ಯರ ಭಾಷೆ ಎಂದು ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮೌಲನಾ ಮುಫ್ತಿ ಮಹಮ್ಮದ್ ಖಾಜಿ ಹೇಳಿದರು.
ಪಟ್ಟಣದಲ್ಲಿ ಉರ್ದು ಅಕಾಡೆಮಿಯಿಂದ ಶುಕ್ರವಾರ ಆಯೋಜಿಸಿದ್ದ ಉರ್ದು ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿವರ್ಷ ಅಕಾಡೆಮಿಗೆ 2 ಕೋಟಿ ರೂ. ಅನುದಾನ ನೀಡುತ್ತಿದೆ. ಆದರೆ, ಈ ಅನುದಾನದಲ್ಲಿ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಭಾಷೆ ಬೆಳವಣಿಗೆಗೆ ಸಂಕುಚಿತತೆ ಸಲ್ಲದು. ಅನ್ಯ ಭಾಷೆಯ ಉತ್ತಮ ಪದಕೋಶಗಳನ್ನು ತಮ್ಮ ಭಾಷೆಯ ಬೆಳವಣಿಗೆಗೆ ಬೆಳೆಸಿಕೊಂಡಾಗ ಯಾವುದೇ ಭಾಷೆಯಾಗಲಿ ಬೆಳವಣಿಗೆಯಾಗಲಿದೆ ಎಂದರು.
ಪತ್ರಕರ್ತ ಜಮೀಲ್ ಆಹಮ್ಮದ್ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿ ಜಿಲ್ಲಾ ಮುಖಂಡ ಅನ್ವರ್‌ಖಾನ್, ಡಾ.ಅಖ್ತರ್ ಸಯ್ಯದ್ ಖಾನಂ, ಸಯ್ಯದ್ ಸಜ್ಜದ್ ಪಾಷ, ಪತ್ರಕರ್ತರಾದ ಅತಿಖುರ್ ರೆಹಮಾನ್, ಮದನ್‌ಗೌಡ ಇದ್ದರು.