ತಾಲೂಕಿನ ಅರೇಹಳ್ಳಿ ಹೋಬಳಿಯ ನಲ್ಕೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾಫಿಯನ್ನು ತಡೆಯಲು ಬೆಳೆಗಾರರು ಹಾಗೂ ಕಾರ್ಮಿಕರು ಪ್ರಯತ್ನಿಸಿದರು. 
ಹಾಸನ

ಅಕಾಲಿಕ ಮಳೆ, ಕಾಫಿ ಬೆಳೆಗಾರರಿಗೆ ಸಂಕಷ್ಟ

ಬೇಲೂರು: ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಸುರಿದ ಮಳೆಗೆ ಮಲೆನಾಡು ಭಾಗದ ಕಾಫಿ ಬೆಳೆಗಾರರು ಹಾಗೂ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ತಾಲೂಕಿನ ಅರೇಹಳ್ಳಿ ಹೋಬಳಿಯ ನಲ್ಕೆ ಗ್ರಾಮದಲ್ಲಿ ಈಗಾಗಲೇ ಕಾಫಿ ಬೆಳೆಗಾರರು ಕಾಫಿ ಬೀಜ ಕೊಯ್ದು ಒಣಗಲು ಕಣದಲ್ಲಿ ಹಾಕಿದ್ದರು. ಇದರ ನಡುವೆ ಸುರಿದ ಅಕಾಲಿಕ ಮಳೆಗೆ ಕಣದಲ್ಲಿದ್ದ ಕಾಫಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಮಳೆಯಲ್ಲಿ ನೆನೆದುಕೊಂಡೆ ಕೊಚ್ಚಿ ಹೋಗುತ್ತಿದ್ದ ಕಾಫಿ ಬೀಜ ಕೊಚ್ಚಿ ಹೋಗದಂತೆ ಬೆಳೆಗಾರರು, ಕೂಲಿ ಕಾರ್ಮಿಕರು ಸಾಕಷ್ಟು ಪ್ರಯತ್ನಿದರು. ಆದರೂ ಕಾಫಿ ಬೀಜ ರಕ್ಷಿಸಿಕೊಳ್ಳಲಾಗದೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.