ಮೆಕ್ಕೆಜೋಳ ಮಾರಾಟ ಮಾಡಿ ಒಂದು ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮಾ ಆಗದಿರುವುದನ್ನು ಖಂಡಿಸಿ ರೈತ ಸಂಘದಿಂದ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಲಾಯಿತು. 
ಹಾಸನ

ಖರೀದಿಸಿದ ಮೆಕ್ಕೆಜೋಳಕ್ಕೆ ಬಾರದ ಹಣ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಖರೀದಿಸಿದ ಮೆಕ್ಕೆಜೋಳಕ್ಕೆ ಬಾರದ ಹಣ
  • ರೈತ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಹಾಸನ: ಕೆಎಂಎಫ್‌ನಲ್ಲಿ ಬೆಂಬಲ ಬೆಲೆಯಡಿ ಮೆಕ್ಕೆಜೋಳವನ್ನು ಮಾರಾಟ ಮಾಡಿ ಒಂದು ತಿಂಗಳು ಕಳೆದರೂ ರೈತರ ಖಾತೆಗೆ ಹಣ ಜಮಾ ಆಗದಿರುವುದು ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗದಿರುವುದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿ ರೈತ ಸಂಘದಿಂದ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಭಾಮಾ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಕುರಿತು ರೈತರು ಡಿ.30ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ತಾಲೂಕು ಮಟ್ಟದ ಎಪಿಎಂಸಿ ಕೇಂದ್ರಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕಾದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಕೆಎಂಎಫ್‌ನಲ್ಲಿ ಈಗಾಗಲೇ ಮಾರಾಟ ಮಾಡಿದ ಮೆಕ್ಕೆಜೋಳದ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕು. ಜತೆಗೆ ಸರ್ಕಾರದ ಆದೇಶದಂತೆ ಎಲ್ಲ ತಾಲೂಕು ಎಪಿಎಂಸಿ ಕೇಂದ್ರಗಳಲ್ಲಿ ತುರ್ತಾಗಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಭೂಮೇಶ್, ಸ್ವಾಮಿಗೌಡ, ಭೋಗ ಮಲ್ಲೇಶ್, ಬಸವರಾಜು , ಮಲ್ಲಿಕಾರ್ಜುನ್ ಇತರರಿದ್ದರು.