ಇತ್ತೀಚೆಗೆ ನಿಧರಾದ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 
ಹಾಸನ

ಹೊಳೆನರಸೀಪುರದಲ್ಲಿ ಚೆನ್ನಮ್ಮರಿಗೆ ಶ್ರದ್ಧಾಂಜಲಿ

ಹೊಳೆನರಸೀಪುರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಬದುಕು ಮಾದರಿ ಎಂದು ಸಾಹಿತಿ ನಾಗೇಶ್ ಕೌಂಡಿನ್ಯ ಬಣ್ಣಿಸಿದರು.
ಪಟ್ಟಣದ ಚೆನ್ನಾಂಬಿಕ ಕನ್ವೆಷನಲ್ ಹಾಲ್‌ನಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ಆಯೋಜಿಸಿದ್ದ ಸಂದರ್ಭದಲ್ಲಿ ಮಾತನಾಡಿ, ದೇವೇಗೌಡರ ಪತ್ನಿಯಾಗಿ ಅವರ ಕುಟುಂಬದ ಸದಸ್ಯರನ್ನು ಮಾಜಿ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಮಂತ್ರಿಗಳನ್ನಾಗಿಸಲು ಬೆನ್ನೆಲುಬಾಗಿದ್ದರು. ದೈವಿಕ ಕಾರ್ಯ, ಜನರೊಂದಿಗೆ ತೋರಿಸುತ್ತಿದ್ದ ಔದಾರ್ಯ ಇಂದಿನ ಮಹಿಳೆಯರಿಗೆ ದಾರಿದೀಪವಾಗಬೇಕಿದೆ ಎಂದರು.
ಗಣ್ಯರು ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರಲ್ಲದೆ ದೀಪ ಬೆಳಗಿಸಿ, ಅವರ ಆತ್ಮಕ್ಕೆ ಶಾಂತಿಕೋರಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಪ್ಪ, ಪುರಸಭಾ ಮಾಜಿ ಅಧ್ಯಕ್ಷ ಸುದರ್ಶನ್, ಸದಸ್ಯ ಎ.ಆರ್.ರವಿಕುಮಾರ್, ತಾಪಂ ಮಾಜಿ ಸದಸ್ಯ ಗುಂಜೇವು ಮಲ್ಲಿಕಾರ್ಜುನ್, ಮುಖಂಡ ಜೈಪ್ರಕಾಶ್ ಹಾಗೂ ಪುರಸಭಾ ಮಾಜಿ ಸದಸ್ಯರು ಇದ್ದರು.