ಚನ್ನರಾಯಪಟ್ಟಣ ತಾಲೂಕಿನ ಗ್ರಾಮೀಣ ಭಾಗದ ರಸ್ತೆಯ ಎರಡು ಬದಿಗಳಲ್ಲಿ ಜಂಗಲ್ ಗಿಡ ಗಂಟಿಗಳು ಸೇರಿದಂತೆ ಬೃಹತ್ ಪ್ರಮಾಣದ ಬೇಲಿ ಗಿಡಗಳನ್ನು ಲೋಕೋಪಯೋಗಿ ಇಲಾಖೆಯ ಆದೇಶದ ಮೇರೆಗೆ ಕಟಾವು ಕಾರ್ಯ ಪ್ರಾರಂಭಿಸಿ ತೆರವುಗೊಳಿಸುತ್ತಿರುವುದು.  
ಹಾಸನ

ಗಿಡಗಂಟಿಗಳ ತೆರವು ಕಾರ್ಯ ಪ್ರಾರಂಭ

ಎಂ.ರವಿ
ಚನ್ನರಾಯಪಟ್ಟಣ: ತಾಲೂಕಿನ ಗ್ರಾಮೀಣ ರಸ್ತೆಯಲ್ಲಿನ ಎರಡು ಬದಿಯಲ್ಲಿರುವ ಗಿಡಗಳನ್ನು ಇಲಾಖೆ ವತಿಯಿಂದ ಕಟಾವು ಮಾಡಿ ತೆರೆವುಗೊಳಿಸುವ ಕಾರ್ಯ ಪ್ರಾರಂಭವಾಗಿದೆ.
ಸವಾರರಿಗೆ ಮಾರಕವಾದ ಗಿಡಗಂಟಿ ಚನ್ನರಾಯಪಟ್ಟಣ ಗ್ರಾಮೀಣ ರಸ್ತೆಯಲ್ಲಿ ಸಂಚಾರ ದುಸ್ತರ ಶೀರ್ಷಿಕೆಯಡಿ ಡಿ.27 ರಂದು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭಾನುವಾರದಿಂದ ತಾಲೂಕಿನ ಗ್ರಾಮೀಣ ಭಾಗದ ರಸ್ತೆಯ ಎರಡೂ ಬದಿಗಳಲ್ಲಿ ಜಂಗಲ್ ಗಿಡಗಂಟಿಗಳು ಸೇರಿದಂತೆ ಬೃಹತ್ ಪ್ರಮಾಣದ ಬೇಲಿ ಗಿಡಗಳನ್ನು ಕಟಾವು ಕಾರ್ಯ ಪ್ರಾರಂಭಿಸಿದ್ದು ಕೆಲವೇ ದಿನಗಳಲ್ಲಿ ಕಟಾವು ಕಾರ್ಯ ಪೂರ್ಣಗೊಳಿಸಲಾಗುವುದೆಂದು ತಿಳಿದಿದ್ದಾರೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ಎರಡು ಬದಿಗಳಲ್ಲಿ ಬೆಳೆದಿರುವ ಜಂಗಲ್ ಗಿಡಗಂಟಿಗಳನ್ನು ಕಟಾವು ಕಾರ್ಯ ಪ್ರಾರಂಭಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತಿರುವುದರಿಂದ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಗ್ರಾಮಾಂತರ ಭಾಗದ ಸಾರ್ವಜನಿಕರು ವಿಜಯವಾಣಿ ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.