ಅರಕಲಗೂಡು ತಾಲೂಕಿನ ರಾಮನಾಥಪುರ ಕಾವೇರಿ ನದಿಯ ಸ್ನಾನ ಘಟ್ಟ ಬಳಿ ಗ್ರಾಪಂ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
ಹಾಸನ

ನಾಳೆ ಷಷ್ಠಿ ಮಹಾ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ನದಿಯಲ್ಲಿ ಸ್ವಚ್ಛತೆ ಕಾರ್ಯ
ಅರಕಲಗೂಡು: ತಾಲೂಕಿನ ರಾಮನಾಥಪುರ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾ ರಥೋತ್ಸವ ಡಿ.26ರಂದು ನಡೆಯಲಿದೆ.
ತಿಂಗಳು ತೇರು ಎಂದೇ ಪ್ರಸಿದ್ಧವಾದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಕಳೆದ ತಿಂಗಳು ನ.26ರಂದು ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವ ನಡೆಸಲಾಗಿತ್ತು. ನಂತರ ಸುಕ್ಷೇತ್ರದಲ್ಲಿ ಕಳೆದ ಒಂದು ತಿಂಗಳಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಪ್ರತಿನಿತ್ಯ ಅಪಾರ ಭಕ್ತರು ಭೇಟಿ ನೀಡಿ ದೇವರ ಪೂಜೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಒಂದು ತಿಂಗಳ ಬಳಿಕ ಡಿ.26ರಂದು ನಡೆಯುವ ರಥೋತ್ಸವದಲ್ಲಿ ಅಪಾರ ಭಕ್ತರು ಭಾಗವಹಿಸಿ ತೇರು ಎಳೆಯಲಿದ್ದಾರೆ. ರಥೋತ್ಸವ ಹಿನ್ನೆಲೆಯಲ್ಲಿ ಸ್ವಚ್ಛತೆ ಸೇರಿದಂತೆ ಸಿದ್ಧತಾ ಕಾರ್ಯ ನಡೆದಿವೆ.
ಕಾವೇರಿ ನದಿ ದಂಡೆಯಲ್ಲಿರುವ ನಾಗರ ಕಲ್ಲಿಗೆ ಭಕ್ತರು ಹಾಲು, ಮೊಸರು, ತುಪ್ಪ, ಬೆಣ್ಣೆ, ಉಪ್ಪು ತಂದು ಹಾಕುತ್ತಿದ್ದು, ಇದರಿಂದ ಅಶ್ವತ್ಥ ಕಟ್ಟೆ ಶುಚಿಗೊಳಿಸಲಾಗಿದೆ. ಗೋಗರ್ಭ ಕುಮಾರಧಾರ ತೀರ್ಥ, ಸ್ನಾನ ಘಟ್ಟಗಳ ಬಳಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಸ್ನಾನಘಟ್ಟ ಬಳಿ ಮಹಿಳೆಯರು ಬಟ್ಟೆ ಬದಲಿಸಲು ನಿರ್ಮಿಸಿರುವ ತಾತ್ಕಾಲಿಕ ಶೆಡ್‌ಗಳನ್ನು ಸರಿಪಡಿಸಲಾಗಿದೆ.