ಹಿರಿಸಾವೆ ಪಟ್ಟಣದ ಸವಿತ ಮಂಗಳವಾದ್ಯ ಕಲಾಸಂಘ ಮತ್ತು ನ್ಯೂ ಸವಿತಾ ಸಮಾಜ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತ್ಯಾಗರಾಜರು, ಪುರಂದರದಾಸರು, ಕನಕದಾಸರ ಮಹೋತ್ಸವದ ಮೆರವಣಿಗೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು. ವಿರಾಜ್, ಎಚ್.ಕೆ. ಮಂಜುನಾಥ್, ವೆಂಕಟೇಶ್, ಮಂಜು, ರವಿಕುಮಾರ್ ಇತರರು ಇದ್ದರು. 
ಹಾಸನ

ತ್ಯಾಗರಾಜರ ಸಂಗೀತ ಮಂಗಳವಾದ್ಯ ಕಲಾವಿದರಿಗೆ ದಾರಿದೀಪ

ಪ್ರಮುಖ ಮುಖ್ಯಾಂಶಗಳು

  • ಹೊಸೂರು ಶನೈಶ್ಚಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶ್ರೀಧರಸ್ವಾಮಿ ಬಣ್ಣನೆ
ಹಿರೀಸಾವೆ: ತ್ಯಾಗರಾಜರ ಸಂಗೀತ ಪದ್ಧತಿ ಸವಿತಾ ಮಂಗಳವಾದ್ಯ ಕಲಾವಿದರ ಬದುಕಿಗೆ ದಾರಿದೀಪವಾಗಿದೆ ಎಂದು ಹೊಸೂರು ಶನೈಶ್ಚಸ್ವಾಮಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶ್ರೀಧರಸ್ವಾಮಿ ಹೇಳಿದರು.
 ಹಿರೀಸಾವೆ ಹೋಬಳಿಯ ಸವಿತಾ ಮಂಗಳವಾದ್ಯ ಕಲಾ ಸಂಘ ಮತ್ತು ನ್ಯೂ ಸವಿತಾ ಸಮಾಜದವರು ಏರ್ಪಡಿಸಿದ್ದ ತ್ಯಾಗರಾಜರು, ಪುರಂದರದಾಸರು, ಕನಕದಾಸರ ಆರಾಧನ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. 
ತ್ಯಾಗರಾಜುರು ನಾದಬ್ರಹ್ಮನಾದರು, ಸಮಾಜದಲ್ಲಿ ಸರಳವಾಗಿ ಬದುಕುವುದು ಮತ್ತು ಸ್ವರ, ನಾಧ, ಮೇಳ ಸೇರಿದಂತೆ ಹಲವು ರೀತಿಯ ಸಂಗೀತವನ್ನು ನೀಡಿದವರು ಎಂದರು.  
 ಆರಾಧನಾ ಮಹೋತ್ಸವದ ಮೆರವಣಿಗೆ ಚಾಲನೆ ನೀಡಿ, ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಸಂಘದ ಅಧ್ಯಕ ವಿರಾಜ್ ನೇತೃತ್ವದಲ್ಲಿ ಹಲವು ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದಾರೆ, ಇದಕ್ಕೆ ಪೂರಕವಾಗಿ ನಾನು ಸ್ಪಂದಿಸುತ್ತೇನೆ, ಸವಿತಾ ಸಮಾಜ ಸಂಘಕ್ಕೆ ನಿವೇಶನ ಸೇರಿದಂತೆ  ಮೂಲ ಸೌಲಭ್ಯಗಳನ್ನು ಒದಗಿಸಲು ಎಲ್ಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಹೇಳಿದರು.
 ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಎಚ್.ಸಿ. ಲಲಿತಾ ರಾಘವ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಾಂಕ ಗೋಪಾಲಸ್ವಾಮಿ ಮಾತನಾಡಿದರು.  
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಸದಸ್ಯ ಚೇತನ್, ಶಿವಶ್ರೀ ಕಲ್ಯಾಣ ಮಂಟಪದ ಮಾಲೀಕ ಕುಮಾರ್,  , ಮುಖಂಡರಾದ ರವಿಕುಮಾರ್, ಬಾಲಕೃಷ್ಣ, ಶ್ರೀಧರ್, ವೆಂಕಟೇಶ್, ಮಂಜುನಾಥ್, ಬ್ಯಾಂಗಲ್ ಮಹೇಶ್,  ವಾಸು, ಶಶಿಕುಮಾರ್, ಪುಟ್ಟಸ್ವಾಮಿ, ರಘು, ಮೂರ್ತಣ್ಣ, ಮಂಜುನಾಥ ಮೌರ್ಯ ಚನ್ನರಾಯಪಟ್ಟಣ ತಾಲೂಕಿನ ಸವಿತಾ ಸಮಾಜದ ಮುಖಂಡರಾದ ಟಿ.ವಿ. ದಿನೇಶ್, ಲೋಹಿತ್, ಅನಂದ್ ಸೇರಿದಂತೆ ಹೋಬಳಿಯ ನ್ಯೂ ಸವಿತಾ ಸಮಾಜ ಮತ್ತು ಮಂಗಲವಾದ್ಯ ಕಲಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಬೆಳಗ್ಗೆ ಶನಿದೇವರ ದೇವಸ್ಥಾನದಿಂದ ತ್ಯಾಗರಾಜರು, ಪುರಂದರದಾಸರು, ಕನಕದಾಸರ ಭಾವಚಿತ್ರದ ಮೆರವಣಿಗೆ ಮಂಗಳವಾಧ್ಯದೊಂದಿಗೆ ಪ್ರಾರಂಭವಾಗಿ, ಶ್ರೀಕಂಠಯ್ಯ ವೃತ್ತ, ಗ್ರಾಮ ಪಂಚಾಯಿತಿ ರಸ್ತೆ ಸೇರಿದಂತೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಮಧ್ಯಾಹ್ನದ ನಂತರ ಕಲಾವಿದರಿಂದ ನಾದಸ್ವರ ಕಛೇರಿ ನಡೆಯಿತು.