ಚನ್ನರಾಯಪಟ್ಟಣದಲ್ಲಿ ಸೂರಜ್ ರೇವಣ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಹಾಗೂ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸೂರಜ್ ರೇವಣ್ಣ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ವಿತರಣೆ ಮಾಡಿದರು. ಸಿ.ಎನ್.ಪುಟ್ಟಸ್ವಾಮೀಗೌಡ, ಚರಣ್ ಗೌಡ, ದೀಪಕ್, ಚೋಳೇನಹಳ್ಳಿ ಸುರೇಶ್, ನಟ್ಟೆಕೆರೆ ನಾಗರಾಜು, ಎ.ಎಂ.ಬಾಲಚಮಕದ್ರ, ಕರಡೇವು ಸತೀಶ್, ಚಂದು, ರಕ್ಷಿತ್, ಸಚಿನ್, ರಾಘು ಇದ್ದರು.
- ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅಭಿಮತ
ಚನ್ನರಾಯಪಟ್ಟಣ: ಹಣ ಹಾಗೂ ಅಧಿಕಾರ ಇದ್ದರೆ ಸಾಲದು ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಆರೋಗ್ಯವಂತರೇ ಸಮಾಜದ ನಿಜವಾದ ಶ್ರೀಮಂತರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ತಿಳಿಸಿದರು.
ಪಟ್ಟಣದಲ್ಲಿ ಸೂರಜ್ ರೇವಣ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಹಾಗೂ ಅಭಿಮಾನಿಗಳ ಸಂಘದಿಂದ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ಶನಿವಾರ ಆಯೋಜಿಸಿದ್ದ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ, ಆರೋಗ್ಯ ತಪಾಸಣೆ ಶಿಬಿರ ಮತ್ತು ಗಿಡ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರೋಗ್ಯ ವಿಮೆ ಮಾಡಿಸಿದರೆ ಸಾಲದು, ನಮ್ಮ ಬಳಿ ಇರುವ ವಾಹನಗಳಿಗೂ ಸಕಾಲಕ್ಕೆ ವಿಮೆ ಮಾಡಿಸಬೇಕು, ಬೈಕ್‌ನಲ್ಲಿ ಸಂಚಾರ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡಬೇಕು. ಹೆಲ್ಮೆಟ್ ಬಳಕೆ ಮಾಡುವುದರಿಂದ ಜೀವ ಸುರಕ್ಷವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಆಹಾರ ಸೇವನೆ ಹೆಚ್ಚಾಗುತ್ತಿದೆ, ರಸ್ತೆ ಬದಿಯಲ್ಲಿ ಕುರುಕಲು ತಿಂಡಿ ತಿನ್ನುವುದನ್ನು ಕಡಿಮೆ ಮಾಡಬೇಕು, ಹಳೇ ಎಣ್ಣೆ ಬಳಕೆ ಮಾಡುವುದರಿಂದ ಎಣ್ಣೆಯಲ್ಲಿ ಕರಿದ ತಿಂಡಿ ತಿಂದು ಹೃದಯ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ. ಮನೆಯಲ್ಲಿ ನಿತ್ಯವೂ ಊಟ ಮಾಡುವುದನ್ನು ಮೈಗೂಡಿಸಿಕೊಳ್ಳಿ, ಅನಿವಾರ್ಯ ಸಮಯದಲ್ಲಿ ಮಾತ್ರ ಹೊರಗೆ ಊಟ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನೂರಾರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಅನ್ನು ಉಚಿತಗವಾಗಿ ವಿತರಣೆ ಮಾಡಲಾಯಿತು. ಮಾಧ್ಯಮಿಕ ಶಾಲಾ ಆವರಣದಲ್ಲಿ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ ನಂತರ ಬಂದ ಸಾರ್ವಜನಿಕರಿಗೆ ಸಾವಿರಾರು ಗಿಡಗಳ ವಿತರಣೆ ಮಾಡಿದರು.
ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಸಂಚಾರಿ ಪೊಲೀಸ್ ಠಾಣಾ ಪಿಎಸ್‌ಐ ಚರಣ್ ಗೌಡ, ಎಚ್‌ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೀಪಕ್, ಮುಖಂಡರಾದ ಚೋಳೇನಹಳ್ಳಿ ಸುರೇಶ್, ನಟ್ಟೆಕೆರೆ ನಾಗರಾಜು, ಎ.ಎಂ.ಬಾಲಚಮಕದ್ರ, ಕರಡೇವು ಸತೀಶ್, ಚಂದು, ರಕ್ಷಿತ್, ಸಚಿನ್, ರಾಘು, ಸೇರಿ ಇತರರು ಇದ್ದರು.