ನಾಡಪ್ರಭು ಕೆಂಪೇಗೌಡರ ಜನ್ಮದಿನದ ಅಂಗವಾಗಿ ಕೆಂಪೇಗೌಡರ ಪ್ರತಿಮೆಗೆ ಶಾಸಕ ಎಚ್.ಕೆ.ಸುರೇಶ್ ನಮನ ಸಲ್ಲಿಸಿದರು. ಎಂ.ಎ.ನಾಗರಾಜ್, ಶ್ರೀಧರ್ ಕಂಕನವಾಡಿ, ಅಕ್ರಂ ಷರ್ೀ ಇತರರು ಇದ್ದರು. 
ಹಾಸನ

ನಾಡಪ್ರಭುವಿನ ಆಡಳಿತ ಸದಾ ಸ್ಮರಣೀಯ

ಪ್ರಮುಖ ಮುಖ್ಯಾಂಶಗಳು

  • The rule of Nadaprabhu
ಬೇಲೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಹಾಗೂ ಜನಪರ ಕಾಳಜಿ ಸ್ಮರಣೀಯವಾಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶ ಅಳವಡಿಸಿಕೊಂಡು ಸಾಗಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನದ ಅಂಗವಾಗಿ ಶನಿವಾರ ಕೆಂಪೇಗೌಡ ಸೇವಾ ಸಮಿತಿ, ಯುವ ವೇದಿಕೆ ಹಾಗೂ ತಾಲೂಕು ಆಡಳಿತದಿಂದ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪಹಾರ ಸಲ್ಲಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿ ಎಲ್ಲ ಜಾತಿ, ಜನಾಂಗದವರಿಗೂ ಅವರ ಕಸುಬಿಗನುಸಾರ ಆರ್ಥಿಕ ಶಕ್ತಿ ತುಂಬುದ ಉದ್ದೇಶದಿಂದ ಪ್ರತ್ಯೇಕ ಪೇಟೆ ನಿರ್ಮಿಸಿ ಜೀವನೋಪಾಯಕ್ಕೆ ದಾರಿ ಮಾಡಿ ಕೊಟ್ಟವರು. ಅಂದೇ ರೈತರ ಅನುಕೂಲಕ್ಕಾಗಿ ಕೆರೆ-ಕಟ್ಟೆ ನಿರ್ಮಿಸಿದವರು. ವಿಶ್ವದ ಭೂಪಟದಲ್ಲಿ ಬೆಂಗಳೂರಿನ ಹೆಸರಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣ. ಕೆಂಪೇಗೌಡರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮತ್ತು ಆರ್ಥಿಕತೆಯ ಜತೆಗೆ ಪರಿಸರಕ್ಕೆ ಪೂರಕವಾದ ಆಡಳಿತ ನೀಡಿದವರು. ಇಂತಹ ಮಾಹನ್ ವ್ಯಕ್ತಿಯ ಪ್ರತಿಮೆಯನ್ನು ಬೇಲೂರು ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ. ಅಲ್ಲದೆ, ಶನಿವಾರ ತಾಲೂಕು ಆಡಳಿತದಿಂದ ಸರಳವಾಗಿ ಕಾರ್ಯಕ್ರಮ ಮಾಡಿದ್ದು, ಜೂನ್ 29ರಂದು ಸಮಾಜವರು ಸೇರಿ ಅದ್ದೂರಿಯಾಗಿ ಕೆಂಪೇಗೌಡರ ಜಯಂತಿ ಆಚರಿಸಲಾಗುವುದು ಎಂದರು.
ಕೆಂಪೇಗೌಡ ಸೇವಾ ಸಮಿತಿ ಅಧ್ಯಕ್ಷ ಎಂ.ಎ.ನಾಗರಾಜ್ ಮಾತನಾಡಿ, ಕೆಂಪೇಗೌಡರು ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೆ ಆಡಳಿತದಲ್ಲಿ ಎಲ್ಲರಿಗೂ ಜನಪರ ಆಡಳಿತ ನೀಡಿದ್ದಾರೆ. ಇಂತಹ ಮಾಹನ್ ಪುರುಷರ ವ್ಯಕ್ತಿತ್ವ ಮತ್ತು ಆಡಳಿತ ವೈಖರಿ ಇಂದಿನವರಿಗೆ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಬೇಲೂರಿನಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪಿಸಿ, ಅಂದಿನಿಂದ ಜನ್ಮ ದಿನ ಆಚರಿಸುತ್ತಾ ಬಂದಿದ್ದೇವೆ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್, ಮಾಜಿ ಅಧ್ಯಕ್ಷ ಎ.ಆರ್.ಆಶೋಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ, ಯುವ ವೇದಿಕೆ ಗೌರವಾಧ್ಯಕ್ಷ ಪೃಥ್ವಿ, ಅಧ್ಯಕ್ಷ ದಿನೇಶ್, ಪ್ರಧಾನ ಕಾರ್ಯದರ್ಶಿ ಗಣೇಶ್, ಮುಖಂಡರಾದ ಲೋಹಿತ್, ದಿನೇಶ್, ಅಭಿಗೌಡ, ಪುಟ್ಟಸ್ವಾಮಿಗೌಡ, ಗೌಡೇಗೌಡ, ಲೋಹಿತ್ ಮಹೇಶಗೌಡ, ಸುರೇಶ್, ಗಂಗೇಶ್, ಸತೀಶ್ ಸೇರಿದಂತೆ ಇತರರಿದ್ದರು.