ಆಲೂರು ತಾಲೂಕು ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಇಫ್ತಾರ್ ಸೌಹಾರ್ದ ಕೂಟ ಉದ್ಘಾಟಿಸಿ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿದರು. ರಿಜ್ವಾನ್ ಖಾಲಿದ್, ಮೊಹಮ್ಮದ್ ಜಬಿಉಲ್ಲ, ಜಾಫರ್ ಉಪಸ್ಥಿತರಿದ್ದರು.
ಆಲೂರು: ಧರ್ಮ, ಜಾತಿ ಭೇದವಿಲ್ಲದೆ ಸೌಹಾರ್ದತೆ, ಸಹೋದರತ್ವ ಮತ್ತು ಪರಸ್ಪರ ಗೌರವ ಬೆಳೆಸುವುದೇ ಇಫ್ತಾರ್ ಸೌಹಾರ್ದ ಕೂಟದ ಮೂಲ ಉದ್ದೇಶ ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದರು.
ಆಲೂರು ತಾಲೂಕು ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ, ಪಟ್ಟಣದ ದೊಡ್ಡಿಬೀದಿ ಪ್ರಕೃತಿ ನಗರದ ಜಬಿಉಲ್ಲಾ ಅವರ ಗೃಹದಲ್ಲಿ ಏರ್ಪಡಿಸಿದ್ದ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಹೇಳುವಂತೆ ಇಸ್ಲಾಮಿನ ದೇಹ, ವೇದಾಂತದ ಮೆದುಳು ಸೇರಿದಾಗ ಮಾತ್ರ ಭಾರತದ ಔನತ್ಯ ಸಾಧ್ಯ. ಎಲ್ಲ ಧರ್ಮಗಳ ಅಂತಿಮ ಗುರಿ ಮಾನವ ಜೀವನದ ಸಾಕ್ಷತ್ಕಾರ, ಮುಕ್ತಿಯಾಗಿದೆ ಎಂದು ತಿಳಿಸಿದರು.
ಜಮಾತೆ ಇಸ್ಲಾಮಿ ಹಿಂದ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಿಜ್ವಾನ್ ಖಾಲಿದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಲೂರು ಬಿಲಿವರ್ಸ್ ಚರ್ಚ್ ಫಾದರ್ ಡಿ.ಸಿ. ಬಸವರಾಜ್, ಮೊಹಮ್ಮದ್ ಜಬಿಉಲ್ಲ, ಜಾಫರ್ ಇತರರು ಉಪಸ್ಥಿತರಿದ್ದರು.