ಕೇಂದ್ರ ಸರ್ಕಾರದ ಪ್ರಸ್ತಾಪಿತ ವಿದ್ಯುತ್ ಕಾಯ್ದೆ ತಿದ್ದುಪಡಿ ಕಾಯ್ದೆಯನ್ನು ಕೈಬಿಡುವಂತೆ ಆಗ್ರಹಿಸಿ ಸೆಸ್ಕ್ ಸಿಬ್ಬಂದಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.  
ಹಾಸನ

ವಿದ್ಯುತ್ ವಲಯ ಖಾಸಗೀಕರಣಸಲ್ಲದು

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಸೆಸ್ಕ್ ನೌಕರರು, ಸಿಬ್ಬಂದಿಯಿಂದ ಪಟ್ಟಣದ ಕಚೇರಿ ಮುಂದೆ ಪ್ರತಿಭಟನೆ
ಬೇಲೂರು: ಕೇಂದ್ರ ಸರ್ಕಾರದ ಪ್ರಸ್ತಾಪಿತ ವಿದ್ಯುತ್ ಕಾಯ್ದೆ ತಿದ್ದುಪಡಿ 2026 ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವ ಸೂಚನೆ ಕಾಣುತಿದ್ದು, ಯಾವುದೇ ಕಾರಣಕ್ಕೂ ವಿದ್ಯುತ್ ವಲಯ ಖಾಸಗೀಕರಣವಾಗಬಾರದು. ಇದರಿಂದ ರೈತರು, ಬಡವರಿಗೆ ಹೊರೆಯಾಗುತ್ತದೆ ಎಂದು ಸೆಸ್ಕ್ ನೌಕರರು ಪಟ್ಟಣದ ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿದರು.
ಸೆಸ್ಕ್ ನೌಕರರು ಮತ್ತು ಸಿಬ್ಬಂದಿ ಪಟ್ಟಣದ ಕಚೇರಿ ಮುಂದೆ ಜಮಾವಣೆಗೊಂಡು 2026ರ ವಿದ್ಯುತ್ ಕಾಯ್ದೆ ಪ್ರಾಸ್ತಾಪಿತ ತಿದ್ದುಪಡಿ ಬೇಡವೇ ಬೇಡ, ಕಂಟೆಂಟ್ ಮತ್ತು ಕ್ಯಾರೇಜ್ ಕಾರ್ಮಿಕರಿಗೆ ಮತ್ತು ಗ್ರಾಹಕರಿಗೆ ಹಾನಿಕಾರವಾಗಿದೆ. ಕಾರ್ಮಿಕರು-ಅಧಿಕಾರಿಗಳ ಒಗ್ಗಟ್ಟು ಚಿರಾಯುವಾಗಲಿ. 2026ರ ವಿದ್ಯುತ್ ಸುಧಾರಣಾ ಕಾಯ್ದೆ ತಿದ್ದುಪಡಿ ಬೇಡ. ವಿದ್ಯುತ್ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ಸಲ್ಲದು. ಕಾರ್ಮಿಕರ ವಿರೋಧ ನೀತಿಗೆ ದಿಕ್ಕಾರದ ಘೋಷಣೆ ಕೂಗಿ, ಪ್ರತಿಭಟನೆ ನಡೆಸಿ ಸೆಸ್ಕ್ ಎಇಇ ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ಸೆಸ್ಕ್ ನೌಕರರ ಸಂಘದ ಮುಖಂಡರಾದ ಮಂಜುನಾಥ್ ಮತ್ತು ನವಾಜ್ ಮಾತನಾಡಿ, ಕೇಂದ್ರ ಸರ್ಕಾರದ ಪ್ರಸ್ತಾವಿತ ವಿದ್ಯುತ್ ಕಾಯ್ದೆ ತಿದ್ದುಪಡಿ ನಿಜಕ್ಕೂ ಖಾಸಗೀಕರಣದ ಹುನ್ನಾರವಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಇದ್ದರಿಂದ ಗ್ರಾಹಕರಿಗೆ ತೀವ್ರ ನಷ್ಟವಾಗಲಿದೆ. ಇದು ರೈತರಿಗೆ ತೊಂದರೆಯಾಗಲಿದೆ. ಬಡವರು ವಿದ್ಯುತ್ ಬಿಲ್ ಪಾವತಿ ಮಾಡಲು ಸಾದ್ಯವಾಗುದಿಲ್ಲ. ವಿದ್ಯುತ್ ಖಾಸಗೀಕರಣದ ಮಾಲೀಕತ್ವದಲ್ಲಿ ನೌಕರರು ಇಕ್ಕಟ್ಟಿನಲ್ಲಿ ಸಿಲುಕುವುದಲ್ಲದೆ ಯಾವುದೇ ಸೌಲಭ್ಯಗಳಿಲ್ಲದೆ ಕೆಲಸ ನಿರ್ವಹಿಸುವ ದುಸ್ಥಿತಿ ಬರಲಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ವಿದ್ಯುತ್ ಇಂದು ಮೂಲಭೂತ ಹಕ್ಕಾಗಿದೆ ಹೊರತು ಭಿಕ್ಷೆಯಲ್ಲ. ಈಗ ತರಲು ಹೊರಟಿರುವ ಮಸೂದೆ ರೈತರು ಮತ್ತು ಬಡವರ ವಿರೋಧಿಯಾಗಿದೆ. ಕೇಂದ್ರ ಸರ್ಕಾರ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸೆಸ್ಕ್ ಎಇಇ ಬಸವರಾಜು, ಖಾಸಗೀಕರಣದಿಂದ ರೈತರು ಮತ್ತು ಬಡವರಿಗೆ ಹೊರೆಯಾಗುವ ಇಂತಹ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಿಬ್ಬಂದಿ ಪ್ರತಿಭಟಿಸಿ ಮನವಿ ಸಲ್ಲಿಸಿದ್ದಾರೆ. ಈ ಮನವಿ ಪತ್ರವನ್ನು ಉನ್ನತಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಬೇಲೂರು ವಿಭಾಗದ ಸೆಸ್ಕ್ ಸಿಬ್ಬಂದಿ ಇದ್ದರು.