ಲಯನ್ಸ್ ಸಂಸ್ಥೆ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು.ಸಂಜೀತ್ ಶೆಟ್ಟಿ ಇತರರಿದ್ದರು.  
ಹಾಸನ

ನಿಸ್ವಾರ್ಥಸೇವಾ ಮನೋಭಾವಕ್ಕೆ ಲಯನ್ಸ್ ಸಂಸ್ಥೆ ಸಾಕ್ಷಿ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಲಯನ್ಸ್ ಮಾಜಿ ಪ್ರಾಂತಪಾಲ ಅರುಣ್‌ಶೆಟ್ಟಿ ಅಭಿಮತ
ಸಕಲೇಶಪುರ: ನಿಸ್ವಾರ್ಥಸೇವೆಗೆ ಮತ್ತೊಂದು ಹೆಸರೇ ಲಯನ್ಸ್ ಸಂಸ್ಥೆ ಎಂದು ಜಿಲ್ಲಾ ಲಯನ್ಸ್ ಮಾಜಿ ಪ್ರಾಂತಪಾಲ ಅರುಣ್‌ಶೆಟ್ಟಿ ಹೇಳಿದರು.
ಪಟ್ಟಣದ ಇತ್ತೀಚೆಗೆ ಹಮ್ಮಿಕೊಂಡಿದ್ದ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಲಯನ್ಸ್ ಸಂಸ್ಥೆ ಸೇರುವುದು ಹೆಮ್ಮೆಯ ವಿಚಾರ. ಕಳೆದ 50 ವರ್ಷಗಳ ಹಿಂದೆ ಸೇವೆಯ ಉದ್ದೇಶಕ್ಕಾಗಿ ಸ್ಥಾಪಿತವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಹಿರಿಯರ ಶ್ರಮ ಹೆಚ್ಚಿನದಾಗಿದೆ. ಸರ್ಕಾರ ಮಾಡಬಹುದಾದ ಸಾಕಷ್ಟು ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಲಿಯೋ ಸಂಸ್ಥೆ ಪದಗ್ರಹಣ ನೆರವೇರಿಸಿ ಮಾತನಾಡಿದ ಮಾಜಿ ಲಯನ್ಸ್ ಪ್ರಾಂತಪಾಲ ವಸಂತಶೆಟ್ಟಿ, ಮಕ್ಕಳನ್ನು ಮುಖಂಡರನ್ನಾಗಿ ಮಾಡುವ ಉದ್ದೇಶದಿಂದ ಲಿಯೋ ಕ್ಲಭ್ ಸ್ಥಾಪಿಸಲಾಗಿದ್ದು ಇಲ್ಲಿ ವಿದ್ಯಾರ್ಥಿಗಳಿಗೆ ಸೇವೆಯ ಮಹತ್ವ ಹೇಳಿಕೊಡಲಾಗುವುದಲ್ಲದೆ, ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷರಾಗಿ ವಡ್ಗಲ್ ವಿಶ್ವನಾಥ್, ಕಾರ್ಯದರ್ಶಿ ಲಕ್ಷ್ಮಣ್ ರಾಮ್ ಗುರ್ಜರ್, ಸಹಕಾರ್ಯದರ್ಶಿ ಜಯಶಂಕರ್, ಖಜಾಂಚಿಯಾಗಿ ಸೋಮಶೇಖರ್ ಆಯ್ಕೆಯಾಗಿದ್ದಾರೆ.
ಸಂಜೀತ್ ಶೆಟ್ಟಿ ಉಪಸ್ಥಿತರಿದ್ದರು.