ವಿಶ್ವ ಛಾಯಾಗ್ರಾಹಕರ ದಿನಾಚರಣೆ ಹಿನ್ನೆಲೆಯಲ್ಲಿಯಲ್ಲಿ ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಜಗದೀಶ್, ಅರುಣ್ ಕುಮಾರ್,ಧನಂಜಯ್. ಜಯರಾಮ್,ಭೈರೇಶ್, ಯೋಗೀಶ್, ಅಶೋಕ್ ಚೇತನ್,ವಿಜಯ್ ಕುಮಾರ್, ವಿರುಪಾಕ್ಷ ಇತರರಿದ್ದಾರೆ.  
ಹಾಸನ

ಛಾಯಾಗ್ರಾಹಕರ ನೆರವಿಗೆ ಸರ್ಕಾರ ಧಾವಿಸಲಿ

ಪ್ರಮುಖ ಮುಖ್ಯಾಂಶಗಳು

  • ಬೈಕ್ ರ‌್ಯಾಲಿ

ಅರಸೀಕೆರೆ:

ಸಂಕಷ್ಟಕ್ಕೆ ಸಿಲುಕಿರುವ ಛಾಯಾಗ್ರಾಹಕರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಜಗದೀಶ್ (ಅಣ್ಣಯ್ಯ) ಒತ್ತಾಯಿಸಿದರು.

ವಿಶ್ವ ಛಾಯಾಗ್ರಾಹಕರ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿದ ಬಳಿಕ ಬಸವೇಶ್ವರ ವೃತ್ತದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ 150ಕ್ಕೂ ಹೆಚ್ಚಿನ ಸ್ಟುಡಿಯೋಗಳಿದ್ದು ಮುನ್ನೂರೈವತ್ತು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಡಿಜಿಟಲ್ ತಂತ್ರಜ್ಞಾನದ ಪರಿಣಾಮ ಪ್ರತಿದಿನವೂ ವೃತ್ತಿಯಲ್ಲಿ ಸವಾಲು ಎದುರಿಸುವಂತಾಗಿದೆ. ಜತೆಗೆ ದೈನಂದಿನ ದುಡಿಮೆಗೂ ಪೆಟ್ಟು ಬಿದ್ದಿದೆ. ಜನ ಜೀವನದ ಪ್ರತಿಬಿಂಬದಂತೆ ನಿತ್ಯವೂ ದುಡಿಯುವ ಕೈಗಳನ್ನು ಬಲಪಡಿಸಬೇಕಿದೆ. ಕಾಟಾಚಾರಕ್ಕೆ ಎಂಬಂತೆ ಕಾರ್ಮಿಕ ಇಲಾಖೆಗೆ ಸೇರ್ಪಡೆ ಮಾಡಿದ್ದು ಇದೂವರೆಗೂ ಯಾವುದೇ ಸವಲತ್ತುಗಳನ್ನು ನೀಡಿಲ್ಲ. ವಿಮೆ, ಆರೋಗ್ಯ ವಿಮೆ, ಆಧುನಿಕ ಪರಿಕರ ಕೊಳ್ಳಲು ಸಾಲ ಸೌಲಭ್ಯ ಮರೀಚಿಕೆಯಾಗಿದೆ. ಸರ್ಕಾರ ವಾಸ್ತವ ಮನಗಂಡು ಛಾಯಾಗ್ರಾಹಕರ ನೆರವಿಗೆ ಧಾವಿಸಬೇಕು ಎಂದರು.
ಕಾರ್ಯದರ್ಶಿ ಟಿ.ವಿ .ಅರುಣ್ ಕುಮಾರ್ ಮಾತನಾಡಿ, ಸಮಸ್ಯೆ ಕುರಿತು ಸಂಘದ ಸದಸ್ಯರು ಕುಳಿತು ಚರ್ಚಿಸಲು ಸುಸಜ್ಜಿತ ಭವನದ ಅಗತ್ಯವಿದೆ. ಮಕ್ಕಳ ಶಿಕ್ಷಣದ ಕನಸು ನನಸಾಗಿಸಲು ಸಾಲಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬೃಹತ್ ಕ್ಯಾಮರಾ ಸ್ತಬ್ಧ ಚಿತ್ರ ಗಮನ ಸೆಳೆಯಿತು . ಖಜಾಂಚಿ ಬಿ.ಎಸ್. ಸತೀಶ್ ,ಕಾರ್ಯಕಾರಿ ಸಮಿತಿ ಸದಸ್ಯರಾದ, ಧನಂಜಯ್. ಜಯರಾಮ್,ಭೈರೇಶ್, ಯೋಗೀಶ್, ಅಶೋಕ್ ಚೇತನ್,ವಿಜಯ್ ಕುಮಾರ್, ವಿರುಪಾಕ್ಷ,
ಪ್ರಸನ್ನ ಕುಮಾರ್, ಆಕರ್ಷ ಆದರ್ಶ, ಹಿರಿಯ ಛಾಯಾಗ್ರಾಹಕರಾದ ಗೋವಿಂದರಾಜಲು ನಾಯ್ಡು, ಪ್ರಭಾಕರ್ ನಾಯ್ಡು, ಪ್ರಕಾಶ್ ತಗ್ಗಿನಮನಿ, ವೇಣುಗೋಪಾಲ್ ನಾಯ್ಡು, ರಂಗನಾಥ್ ಸೇರಿದಂತೆ ಸಂಘದ ಸದಸ್ಯರು ಪಾಲ್ಗೊಂಡಿದ್ದರು.