ಅರಕಲಗೂಡು ತಾಲೂಕು ಹುಲಿಕಲ್ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ ಜರುಗಿತು.
ಅರಕಲಗೂಡು : ತಾಲೂಕಿನ ಹುಲಿಕಲ್ ಗ್ರಾಮದ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ ಶುಕ್ರವಾರ ವೈಭವದಿಂದ ಜರುಗಿತು.
ರಥೋತ್ಸವ ಪ್ರಯುಕ್ತ ದೇವಾಲಯದಲ್ಲಿ ಕೆಲ ದಿನಗಳಿಂದ ವಿವಿಧ ಪೂಜೆ, ಉತ್ಸವಗಳು ನಡೆದವು. ಬೆಳಗ್ಗೆ ಕೃಷ್ಣ ಗಂಧೋತ್ಸವ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಶುಭ ಮುಹೂರ್ಥದಲ್ಲಿ ದೇವರ ಉತ್ಸವ ಮೂರ್ತಿ ಹೊರತಂದು ದೇವಾಲಯ ಪ್ರಾಂಗಣ ಸುತ್ತ ಪ್ರದಕ್ಷಿಣೆ ಹಾಕಿಸಿ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ ಮೂಲಕ ಅದ್ದೂರಿ ಉತ್ಸವ ನಡೆಸಲಾಯಿತು. ಬಳಿಕ ಅಲಂಕೃತ ರಥದ ಮೇಲೆ ದೇವರ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತರ ಜಯಘೋಷಗಳೊಂದಿಗೆ ತೇರು ಎಳೆಯಲಾಯಿತು.
ರಥ ಮುಂದೆ ಸಾಗುವಾಗ ಭಕ್ತರು ತೇರಿನತ್ತ ಹಣ್ಣು, ದವನ ಎಸೆದು ಭಕ್ತಿ ಮೆರೆದರು. ಅಪಾರ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಪುನೀತರಾದರು. ಶಾಸಕ ಎ. ಮಂಜು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.