ಶ್ರೀ ಮಾರಮ್ಮ ದೇವಿಯ ನೂತನ ಶಿಲಾ ವಿಗ್ರಹ ಹಾಗೂ ದೇಗುಲದ ಲೋಕಾರ್ಪಣೆಯ ಧಾರ್ಮಿಕ ಕಾರ್ಯಕ್ರಮದ ಚಂಡಿಕಾ ಹೋಮಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ವಿಶೇಷ ಪೂಜೆ ಸಲ್ಲಿಸಿದರು. ನಾಗರಾಜ್, ರಂಗಸ್ವಾಮಿ, ವಿಠ್ಠಲ್ ಕುಮಾರ್, ಸಂಪತ್ ಕುಮಾರ್, ರಮೇಶ್ , ಕೃಷ್ಣಮೂರ್ತಿ, ಮಂಜುನಾಥ್ ಇತರರಿದ್ದರು. 
ಹಾಸನ

ಶಾಂತಿಯುತ ಬದುಕಿಗೆ ಆಧ್ಯಾತ್ಮದ ಅರಿವು ಆಚರಣೆಗಳು ಬೇಕು

ಎ. ಆರ್. ರಘುರಾಮ

ನುಗ್ಗೇಹಳ್ಳಿ: ಧರ್ಮಕ್ಕಿಂತಲೂ ದಯಾಗುಣ ಶ್ರೇಷ್ಠವಾದದ್ದು ಧಾರ್ಮಿಕ ಮನೋಭಾವದ ಸನ್ಮಾರ್ಗದಲ್ಲಿ ಸಾಗಿದರೆ ಮನುಷ್ಯನಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಹೊನ್ನ ಮಾರನಹಳ್ಳಿಯಲ್ಲಿ ಶುಕ್ರವಾರ ಶ್ರೀ ಮಾರಮ್ಮ ದೇವಿಯ ನೂತನ ಶಿಲಾ ವಿಗ್ರಹ ಹಾಗೂ ದೇಗುಲದ ಲೋಕಾರ್ಪಣೆಯ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
ಶಾಂತಿಯುತ ಬದುಕಿಗೆ ಆಧ್ಯಾತ್ಮದ ಅರಿವು ಆಚರಣೆಗಳು ಬೇಕು ಮನುಷ್ಯ ಸಂಬಂಧಗಳು ಗಟ್ಟಿಗೊಳ್ಳಲು ಹೃದಯ ಶ್ರೀಮಂತಿಕೆ ಬೇಕು. ಮಾನವೀಯತೆಯ ಆದರ್ಶಗಳನ್ನು ಎತ್ತರಕ್ಕೆ ಬೆಳೆಸಬೇಕಾದದ್ದು ಅವಶ್ಯಕ.ದೇಗುಲಗಳ ನಿರ್ಮಾಣದಿಂದ ಮನುಷ್ಯನಿಗೆ ಧಾರ್ಮಿಕ ಮನೋಭಾವದ ಸಂಸ್ಕಾರ ಸಂಸ್ಕೃತಿ ತಿಳಿಯುತ್ತದೆ ಎಂದರು.
ಗ್ರಾಮೀಣ ಭಾಗದ ಮುಗ್ಧ ಮಕ್ಕಳಿಗೆ ತಂದೆ ತಾಯಿಂದಿರು ತಳಮಟ್ಟದಿಂದಲೇ ಗುಣಮಟ್ಟದ ಶಿಕ್ಷಣದ ಭದ್ರಬುನಾದಿ ಹಾಕಬೇಕು ಪ್ರಾಥಮಿಕ ಅಂತದಲ್ಲೇ ಸರಿಯಾದ ವಿದ್ಯಾಭ್ಯಾಸ ಸಂಸ್ಕಾರ ಸಿಕ್ಕರೆ ಗ್ರಾಮೀಣ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು.
ಸಮಾರಂಭದಲ್ಲಿ ಟಿಎಪಿಸಿಎಂಎಸ್ ಸದಸ್ಯ ತೋಟಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರುಗಳಾದ ಎಚ್. ಬಿ. ರಂಗಸ್ವಾಮಿ, ಎಚ್. ಪಿ. ಸಂಪತ್ ಕುಮಾರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿಠ್ಠಲ್ ಕುಮಾರ್, ಮುಖಂಡರುಗಳಾದ ದೇವರಾಜ್, ನಾಗೇಗೌಡ, ಬೋರೇಗೌಡ, ಅನಿಲ್, ಸುನಿಲ್. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್ (ದೊಡ್ಡಯ್ಯ) ಉಪಾಧ್ಯಕ್ಷ ಕೃಷ್ಣಮೂರ್ತಿ, ಮಂಜುನಾಥ್, ಕಾರ್ಯದರ್ಶಿ ಹರೀಶ್, ಶಿಲ್ಪಿ ತಿಪ್ಪೇಸ್ವಾಮಿ, ಹುಲ್ಲೇನಹಳ್ಳಿ ಮಂಜುನಾಥ್, ಪುರೋಹಿತ್ ಅಭಿಲಾಶ್, ಇತರರು ಹಾಜರಿದ್ದರು.