ಅರಕಲಗೂಡು ತಾಲೂಕು ದಾಸನಪುರ ಬೆಟ್ಟದಲ್ಲಿ ಗುರುವಾರ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ ನೆರವೇರಿತು. ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರು ಸಿದ್ಧಲಿಂಗೇಶ್ವರ ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ, ಡಾ. ವಿಶ್ವನಾಥ್, ಬಸವರಾಜು ಮುಂತಾದ ಗಣ್ಯರು ಇದ್ದರು.
ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ದಾಸನಪುರ ಬೆಟ್ಟದ ತಪ್ಪಲಿನಲ್ಲಿ ಗುರುವಾರ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯವನ್ನು ಸೇವೆಗೆ ಸಮರ್ಪಣೆ ಮಾಡಲಾಯಿತು.
ದೇವಾಲಯ ಉದ್ಘಾಟನೆ ಅಂಗವಾಗಿ ವಿವಿಧ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು. ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ಕಂಕಣ ದಾರಣೆ, ಕಲಸ ಪ್ರತಿಷ್ಢಾಪನೆ, ಹೋಮ, ಮಹಾಬಲಿ, ಜಲಾಧಿ ವಾಸ, ಕ್ಷೀರಾಧಿವಾಸ, ದಾನ್ಯಾಧಿವಾಸ ಮತ್ತು ಮಹಾ ಮಂಗಳಾರತಿ ಸೇವೆ ಸಲ್ಲಿಸಲಾಯಿತು.
ಪಂಚಮುಖಿ ಆಂಜನೇಯಸ್ವಾಮಿ ಪ್ರತಿಷ್ಠಾಪನೆ ಪ್ರಯುಕ್ತ ಗಂಗಾಪೂಜೆ, ಕುಂಭ ಮೆರವಣಿಗೆ, ಕಲಶಾಭಿಷೇಕ, ಮಹಾ ಮಂಗಳಾರತಿ, ಕಲಾ ಹೋಮ, ಮಹಾ ಪೂರ್ಣಾಹುತಿ, ಮಹಾಬಲಿ, ಕದಳಿಛೇದನ, ಮಹಾ ಮಂಗಳಾರತಿ ನಂತರ ಪ್ರಸಾದ ವಿತರಣೆ ನಡೆಯಿತು. ಭಕ್ತರು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.
ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೆಸವತ್ತೂರು ಸಿದ್ಧಲಿಂಗೇಶ್ವರ ವಿರಕ್ತ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ, ಡಾ. ವಿಶ್ವನಾಥ್, ಬಸವರಾಜು ಮುಂತಾದ ಗಣ್ಯರು ಇದ್ದರು.