ಸತೀಶ್ 
ಹಾಸನ

ಹೃದಯಾಘಾತದಿಂದ ಶಿಕ್ಷಕ ಸಾವು

ಅರಕಲಗೂಡು: ತಾಲೂಕಿನ ಕೆಬ್ಬೇಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದಾಗಲೇ ಶಿಕ್ಷಕ ಹಠಾತ್ ಹೃದಯಾಘಾತದಿಂದ ನಿಧನರಾದರು.
ಸತೀಶ್ (52) ಮೃತ ಪ್ರಭಾರ ಮುಖ್ಯ ಶಿಕ್ಷಕ. ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿದ್ದು ಮಂಗಳವಾರ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡು ತರಗತಿಯ ಕೊಠಡಿಯಲ್ಲೇ ಕುಸಿದು ಬಿದ್ದಿದ್ದಾರೆ. ಮಕ್ಕಳು ಮತ್ತು ಅಡುಗೆ ಸಿಬ್ಬಂದಿ ತಕ್ಷಣ ಕೇರಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶಿಕ್ಷಕನ ನಿಧನದ ಸುದ್ದಿ ತಿಳಿದ ವಿದ್ಯಾರ್ಥಿಗಳು ಕಣ್ಣೀರಿಟ್ಟರು. ಗ್ರಾಮದಲ್ಲಿ ದುಖಃದ ಛಾಯೆ ಆವರಿಸಿತ್ತು.
ಮೂಲತಃ ಕೇರಳಾಪುರ ಗ್ರಾಮದರಾದ ಶಿಕ್ಷಕ ಸತೀಶ್ ಅವರಿಗೆ ಪತ್ನಿ, ಒಬ್ಬ ಪುತ್ರಿ ಇದ್ದಾರೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.