ಹಗರೆಯ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕ್ರೀಡೋತ್ಸವದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಡಾ.ಸುಜಾತಾ, ಮಮತಾ, ಮಂಜೇಗೌಡ, ಲಾವಣ್ಯಾ, ಕೋಮಲಾ, ಸತೀಶ್, ಗುರುರಾಜ್ ಇತರರಿದ್ದರು 
ಹಾಸನ

ಮಕ್ಕಳಿಗೆ ಪಾಠದೊಂದಿಗೆ ಆಟವನ್ನೂ ಕಲಿಸಿ

ಪ್ರಮುಖ ಮುಖ್ಯಾಂಶಗಳು

  • ಹಾಸನ ಹಿಮ್ಸ್ ವೈದ್ಯಾಧಿಕಾರಿ ಡಾ.ಸುಜಾತಾ
  • ಸರ್ಕಾರಿ ಪ್ರಾಥಮಿಕ ಹಿರಿಯ ಶಾಲಾ ಆವರಣ
  • ಜ್ಞಾನದೀವಿಗೆ ವಿದ್ಯಾ ಸಂಸ್ಥೆ
ಹಗರೆ: ಕ್ರೀಡೆಯಿಂದ ಮಕ್ಕಳ ಆರೋಗ್ಯ ವೃದ್ಧಿಯಾಗುವುದರಿಂದ ಮಕ್ಕಳಿಗೆ ಪಾಠದ ಜತೆಗೆ ಆಟವನ್ನೂ ಕಲಿಸಬೇಕಿದೆ ಎಂದು ಹಾಸನ ಹಿಮ್ಸ್ ವೈದ್ಯಾಧಿಕಾರಿ ಡಾ.ಸುಜಾತಾ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲಾ ಆವರಣದಲ್ಲಿ ಭಾನುವಾರ ಜ್ಞಾನದೀವಿಗೆ ವಿದ್ಯಾ ಸಂಸ್ಥೆಯಿಂದ ಆಯೋಜಿಸಿದ್ದ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿ, ಮಕ್ಕಳು ಉತ್ತಮ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು.
ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕಾದರೆ ಅಧಿಕ ಕ್ಯಾಲ್ಸಿಯಂಯುಕ್ತ ಆಹಾರ ಸೇವನೆ ಮುಖ್ಯ. ನಿತ್ಯ ಆಹಾರ ಪದ್ಧತಿಯಲ್ಲಿ ಸೊಪ್ಪು, ಮೊಟ್ಟೆ, ಕಾಳುಗಳು, ಹಾಲು ಉತ್ಪನ್ನಗಳನ್ನು ಬಳಸಬೇಕು. ಅಲ್ಲದೆ ಪ್ರತಿಯೊಬ್ಬರೂ ಜಂಕ್‌ಫುಡ್‌ನಿಂದ ದೂರವಿದ್ದರೆ ದೈಹಿಕವಾಗಿ ಸದೃಢರಾಗಬಹುದು ಎಂದ ಅವರು, ಮಕ್ಕಳು ಒಂದು ಗಂಟೆ ಹೊರಾಂಗಣ ಆಟ ಆಡಲು ಪಾಲಕರು ಪ್ರೋತ್ಸಾಹಿಸುವಂತಾಗಬೇಕು ಎಂದು ತಿಳಿಸಿದರು.
ಸಮತಾ ಮಹಿಳಾ ಸಂಘದ ಜಿಲ್ಲಾ ಸಂಚಾಲಕಿ ಮಮತಾ ಮಾತನಾಡಿ, ನಮ್ಮ ಮಕ್ಕಳಿಗೆ ನಾವೇ ಸ್ಫೂರ್ತಿಯಾಗಬೇಕು. ಜತೆಗೆ ನಮ್ಮ ವೃತ್ತಿ ಪರಿಚಯವನ್ನು ನಮ್ಮ ಮಕ್ಕಳಿಗೆ ನಾವೇ ಒಂದಾದ ನಂತರ ಒಂದರಂತೆ ತಿಳಿಪಡಿಸಬೇಕು ಎಂದರು.
ಜ್ಞಾನದೀವಿಗೆ ವಿದ್ಯಾ ಸಂಸ್ಥೆ ಅಧ್ಯಕ್ಷ ಮಂಜೇಗೌಡ, ಕಾರ್ಯದರ್ಶಿ ಲಾವಣ್ಯಾ, ಮುಖ್ಯ ಶಿಕ್ಷಕಿ ಕೋಮಲಾ,ಖಜಾಂಚಿ ಸತೀಶ್, ಸದಸ್ಯ ಗುರುರಾಜ್, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯ ರಾಜಯ್ಯ, ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ್, ಗ್ರಾಮದ ಹಿರಿಯರಾದ ಭೀಮಣ್ಣ, ರಾಮಣ್ಣ, ಹಗರೆ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕಾಂತರಾಜು, ಡಾ.ಪ್ರಸನ್ನ ಇತರರಿದ್ದರು.