ಬಾಗುರು ಹೋಬಳಿ ಮಾದಗುಡ್ಡನಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಸ್ವಾಸ್ಥ್ಯ ಆರೋಗ್ಯ ಮಂದಿರದ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಬುಧವಾರ ಭೂಮಿಪೂಜೆ ನೆರವೇರಿಸಿದರು. ಮರಿದೇವೇಗೌಡ, ಭೂದೇಶ್, ವೆಂಕಟರಾಮು, ರಾಜು, ರಾಮು, ಸಂಪತ್‌ಕುಮಾರ್, ಲಕ್ಷ್ಮೀ ಬೂದೇಶ್, ರಂಗೇಗೌಡ, ಇದ್ದರು.  
ಹಾಸನ

ತುರ್ತು ಚಿಕಿತ್ಸೆಗೆ ಸ್ವಾಸ್ಥೃ ಆರೋಗ್ಯ ಮಂದಿರ ಸಹಕಾರಿ

ಬಾಗೂರು: ಹೋಬಳಿಯ ಮಾದಗುಡ್ಡನಹಳ್ಳಿ ಗ್ರಾಮದಲ್ಲಿ 65 ಲಕ್ಷ ರೂ ವೆಚ್ಚದ ಆಯುಷ್ಮಾನ್ ಸ್ವಾಸ್ಥ್ಯ ಆರೋಗ್ಯ ಮಂದಿರ ನಿರ್ಮಾಣಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಬುಧುವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ದಿನದ 24 ಗಂಟೆಯೂ ರೈತರಿಗೆ ಚಿಕಿತ್ಸೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಹಳ್ಳಿಗಳಲ್ಲಿ ಆರೋಗ್ಯ ಸ್ವಾಸ್ಥೃ ಮಂದಿರಗಳನ್ನು ನಿರ್ಮಿಸಲಾಗುತ್ತಿದೆ. ತುರ್ತು ಸಂದರ್ಭ ಚಿಕಿತ್ಸೆ ಕೊಡಿಸಲು ಈ ಆಸ್ಪತ್ರೆಗಳು ಸಹಕಾರಿಯಾಗಲಿವೆ ಎಂದರು.
ಗ್ರಾಮಕ್ಕೆ 25 ಲಕ್ಷ ರೂ. ವೆಚ್ಚದ ಸಮುದಾಯ ಭವನ ಉದ್ಘಾಟಿಸಿ ಶುಭ ಕಾರ್ಯಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಬಡಾವಣೆಗಳಿಗೆ ಸಿಮೆಂಟ್ ರಸ್ತೆಗಳ ಅಭಿವೃದ್ಧಿ, ಲಕ್ಷ್ಮೀದೇವಿ ದೇಗುಲದ ಜೀರ್ಣೋದ್ಧಾರಕ್ಕೆ 12 ಲಕ್ಷ ರೂ. ಅನುದಾನ ನೀಡುವ ಮೂಲಕ ಮಾದಗುಡ್ಡನಹಳ್ಳಿ ಗ್ರಾಮವನ್ನು ಮಾದರಿ ಮಾಡಲಾಗಿದೆ ಎಂದರು.
ಎಂ.ಶಿವರ, ಕೆಂಬಾಳು, ತಗಡೂರು ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಮಾಡಿರುವುದರಿಂದ ಈ ಭಾಗದಲ್ಲಿ ಕೆರೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲೆಗೆ ಸಮೃದ್ಧಿ ಮಳೆಯಾಗಿ ಹೇಮಾವತಿ ಜಲಾಶಯ ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮರಿದೇವೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಭೂದೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವೆಂಕಟರಾಮ್, ಮುಖಂಡರಾದ ಶಿವರ ರಾಜು, ಗೋವಿನ್ಕೆರೆ ರಾಮು, ರಂಗೇಗೌಡ, ಯುವ ಮುಖಂಡ ಸಂಪತ್‌ಕುಮಾರ್, ಲಕ್ಷ್ಮೀ ಭೂದೇಶ್, ಗುತ್ತಿಗೆದಾರ ಕುಮಾರ್, ದೀಪು, ಬಾಬು, ದೊರೆಸ್ವಾಮಿ, ಶರತ್‌ಕುಮಾರ್, ಆನಂದ್, ಸಿದ್ದೇಶ್, ನಂಜುಂಡೇಗೌಡ, ಪ್ರಕಾಶ್, ರಂಗನಾಥ್ ಇತರರು ಹಾಜರಿದ್ದರು.