ಸಂಭ್ರಮದಿಂದ ಪಾಲ್ಗೊಂಡಿದ್ದರು. ಫಾದರ್ ಅಲೆಕ್, ಎಚ್.ಜೋಸೆಫ್, ರಿಜೋ ಥಾಮಸ್ ಇತರರಿದ್ದರು.
- ಹಬ್ಬದ ಸಂಭ್ರಮದಲ್ಲಿ ಮಿಂದ ವಿದ್ಯಾರ್ಥಿಗಳು
- ನಗರದ ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ಕ್ರಿಸ್‌ಮಸ್ ಸಮಾರಂಭ
ಹಾಸನ: ನಗರದ ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ಕ್ರಿಸ್‌ಮಸ್ ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಕ್ಯಾಂಪಸ್ ಡೈರೆಕ್ಟರ್ ರೆವರೆಂಡ್ ಫಾದರ್ ಅಲೆಕ್ ಮಾತನಾಡಿ, ಕ್ರಿಸ್ಮಸ್ ಎಂಬುದು ಮಾನವೀಯತೆಯ ಹಬ್ಬವಾಗಿದ್ದು, ಶಾಂತಿ ಸಹ ಬಾಳ್ವೆಯ ಸಂಕೇತವಾಗಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಹೇಗೆ ಜನರೊಡನೆ ಬೆರೆತು ಪ್ರೀತಿಯಿಂದ ಜೀವಿಸಬೇಕು ಎಂಬ ಸಂದೇಶ ಸಾರುವ ಕ್ರಿಸ್‌ಮಸ್ ಹಬ್ಬ ನಾಡಿನಾದ್ಯಂತ ಆಚರಿಸಲಾಗುತ್ತಿದೆ ಎಂದರು.
ತಮಗಾಗಿ ಹುಟ್ಟುವ ರಾಜನು ಅರಮನೆಯಲ್ಲಿ ಹುಟ್ಟುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕೊಟ್ಟಿಗೆಯಲ್ಲಿ ಹುಟ್ಟಿ ಪ್ರಪಂಚಕ್ಕೆ ಮಾದರಿ ಸಂದೇಶ ನೀಡಿದ ಏಸುಕ್ರಿಸ್ತರ ಜನ್ಮ ದಿನಾಚರಣೆ ಇದಾಗಿದ್ದು, ಸರಳತೆಯ ಬದುಕು ನೆಮ್ಮದಿ ನೀಡುತ್ತದೆ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಪಸರಿಸಿದ್ದಾರೆ ಎಂದರು.
ಶಾಂತಿ, ಸಮಾಧಾನದ ಈ ಹಬ್ಬದಲ್ಲಿ ಕ್ರೈಸ್ತರು ಒಂದೆಡೆ ಸೇರಿ ಯೇಸು ಕ್ರಿಸ್ತನ ಸ್ಮರಣೆ ಮಾಡುವ ಮೂಲಕ ಸಮಾಜಕ್ಕೆ ಒಳಿತನ್ನು ಬಯಸುವ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಎಲ್ಲರ ಪರವಾಗಿ ತಾನು ಕ್ರಿಸ್‌ಮಸ್ ಹಬ್ಬದ ಶುಭಾಶಯ ಕೋರಿದರು.
ಟ್ರಸ್ಟ್ ಶಾಲೆಯ ಪ್ರಾಂಶುಪಾಲ ರೆವರೆಂಡ್ ಫಾದರ್ ಎಚ್.ಜೋಸೆಫ್, ಆಡಳಿತಾಧಿಕಾರಿ ರೆವರೆಂಡ್ ಫಾದರ್ ರಿಜೋ ಥಾಮಸ್, ಫಾದರ್ ಲ್ಯನ್ಸಿ ಎಂ.ಫರ್ನಾಂಡಿಸ್ ಇದ್ದರು.