ಇತಿಹಾಸ ಪ್ರಸಿದ್ಧ ನವಿಲೇ ನಾಗೇಶ್ವರ ಸ್ವಾಮಿ ದೇಗುಲದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಪ್ರಸಾದ ಸೇವಿಸಿದರು. ತಹಸೀಲ್ದಾರ್ ಶಂಕರಪ್ಪ, ಮೋಹನ್ ಕುಮಾರ್, ಲತಾ, ಸದಾಶಿವಪ್ಪ, ನಾಗರಾಜ್, ದೇವರಾಜ್, ಗಿರೀಶ್, ಕುಮಾರಸ್ವಾಮಿ, ಕಾಂತರಾಜ್ ಇದ್ದರು.
- ಇತಿಹಾಸ ಪ್ರಸಿದ್ಧ ನವಿಲೇ ನಾಗೇಶ್ವರ ಸ್ವಾಮಿ ಕ್ಷೇತ್ರ
- ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ
ಬಾಗೂರು: ಇತಿಹಾಸ ಪ್ರಸಿದ್ಧ ನವಿಲೇ ನಾಗೇಶ್ವರ ಸ್ವಾಮಿ ಕ್ಷೇತ್ರಕ್ಕೆ ನಾಗದೋಷಗಳ ನಿವಾರಣೆಗಾಗಿ ಬರುವ ಭಕ್ತರ ಅನುಕೂಲಕ್ಕೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಯೋಜನೆ ರೂಪಿಸುವುದಾಗಿ ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ತಿಳಿಸಿದರು.
ಹೋಬಳಿಯ ಪುರಾಣಪ್ರಸಿದ್ಧ ನವಿಲೇ ನಾಗೇಶ್ವರ ಸ್ವಾಮಿ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ನಾಗೇಶ್ವರಸ್ವಾಮಿ ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಪುರಾಣ ಪ್ರಸಿದ್ಧ ಕೆರೆಯನ್ನು ಹೈಟೆಕ್ ಮಾದರಿ ಮಾಡಿ ಬೋಟಿಂಗ್ ವ್ಯವಸ್ಥೆ ಹಾಗೂ ಕೆರೆ ಏರಿಯ ಪಕ್ಕ ದೇವರ ವನ ನಿರ್ಮಾಣ ಮಾಡುವುದರಿಂದ ಬರುವ ಭಕ್ತಾದಿಗಳಿಗೆ ಶಾಂತಿ ನೆಮ್ಮದಿ ನೀಡುವ ತಾಣವನ್ನಾಗಿ ಮಾಡುವ ಯೋಜನೆ, ಕ್ಷೇತ್ರಕ್ಕೆ ಶುದ್ಧ ನೀರು ಘಟಕ, ಆಶ್ಲೇಷ ಪೂಜೆಗೆ ಪೂಜಾ ಮಂದಿರ, ವಿಶ್ರಾಂತಿ ಗೃಹಗಳ ನಿರ್ಮಿಸಲು ತಹಸೀಲ್ದಾರ್ ಶಂಕರಪ್ಪ ಅವರಿಗೆ ಸೂಚನೆ ನೀಡಿದರು. ಅರ್ಚಕರ ನೇಮಕಾತಿ, ದೇಗುಲದ ಕೆಲಸಗಳಿಗೆ ಸಿಬ್ಬಂದಿ ನೇಮಕಾತಿ ವೇಳೇ ನವಿಲೇ ಗ್ರಾಮದವರನ್ನೇ ನೇಮಕ ಮಾಡಿಕೊಳ್ಳಲು ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಜಿ.ಎನ್.ಶಂಕರಪ್ಪ, ಉಪ ತಹಸೀಲ್ದಾರ್ ಮೋಹನ್ ಕುಮಾರ್, ಮುಜರಾಯಿ ಅಧಿಕಾರಿ ಲತಾ, ಕಂದಾಯ ನಿರೀಕ್ಷಕ ರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರ್, ಮುಖಂಡರಾದ ನಿವೃತ್ತ ಇಂಜಿನಿಯರ್ ಸದಾಶಿವಪ್ಪ, ಅರ್ಚಕ ಪ್ರಸಾದ್, ಎನ್.ಕೆ.ನಾಗಪ್ಪ, ಕಾಂತರಾಜ್, ಎನ್.ಎಸ್.ಗಿರೀಶ್, ದೇವರಾಜ್, ಕೊಪ್ಪಲು ನಾಗೇಶ್, ಏನ್.ಎಲ್.ನಾಗರಾಜ್, ನಾಗಭೂಷಣ್, ಹರೀಶ್, ಗ್ರಾಮ ಲೆಕ್ಕಾಧಿಕಾರಿ ಹರ್ಷ ಇತರರು ಇದ್ದರು.