ಬಾಣಾವರದ ಕೋಟೆ ಬಡಾವಣೆಯ ಶ್ರೀ ವಿಶ್ವಕರ್ಮ ಸಾಮೂಹಿಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಪರಮೇಶ್, ಪಶುಪತಿ ರಾವ್, ಹನುಮಂತಪ್ಪ ಚಿಕ್ಕಣ್ಣಾಚಾರ್, ಮಾದೇಶ್ವರ ಸ್ವಾಮಿ ಒಡೆಯರ್, ಕುಬೇರಪ್ಪ, ಇತರರಿದ್ದರು. 
ಹಾಸನ

ಸತತ ಪ್ರಯತ್ನದಿಂದ ಸ್ಥಾನಮಾನ ಲಭ್ಯ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಶ್ರೀನಿವಾಸ್
  • ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
  • ಬಾಣಾವರ ಪಟ್ಟಣ
  • ಕೋಟೆ ಬಡಾವಣೆಯ ಶ್ರೀ ವಿಶ್ವಕರ್ಮ ಸಾಮೂಹಿಕ ಸಮುದಾಯ ಭವನ
ಅರಸೀಕೆರೆ ಗ್ರಾಮಂತರ: ತಾನು ಮಾಡುವ ಕೆಲಸ, ತನ್ನನ್ನು ನಂಬಿದವರೊಂದಿಗೆ ನಡೆದುಕೊಳ್ಳುವ ರೀತಿ ಹಾಗೂ ಸತತ ಪ್ರಯತ್ನದಿಂದ ಸ್ಥಾನ ಮಾನ ದೊರೆಯಲಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಶ್ರೀನಿವಾಸ್ ಹೇಳಿದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಪಟೇಲ್ ಶಿವಪ್ಪ ಅವರಿಗೆ ತಾಲೂಕಿನ ಬಾಣಾವರ ಪಟ್ಟಣದ ಕೋಟೆ ಬಡಾವಣೆಯ ಶ್ರೀ ವಿಶ್ವಕರ್ಮ ಸಾಮೂಹಿಕ ಸಮುದಾಯ ಭವನದಲ್ಲಿ ಹಿರಿಯ ನಾಗರಿಕರ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಪಟೇಲ್ ಶಿವಪ್ಪ ಅವರಿಗೆ ದೊರಕಿರುವ ಸ್ಥಾನ ನಿಷ್ಠೆ ಮತ್ತು ಪರಿಶ್ರಮದ ಸಂಕೇತ ಎಂದರು.
ಇದೇ ವೇಳೆ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಪ್ಪ, ವಿಶ್ರಾಂತಿ ಪಡೆಯುವ ದಿನಗಳಲ್ಲಿ ಯುವಕರಿಗೆ ಮಾದರಿಯಾಗುವುದರ ಜತೆಗೆ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಲಾಗುವುದು ಎಂದರು.
ಅದ್ದೂರಿ ಕನಕ ಫ್ರೆಂಡ್ಸ್ ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘದಿಂದ ಪಟ್ಟಣದ ಕನಕ ವೃತ್ತದಲ್ಲಿ ಪಟೇಲ್ ಶಿವಪ್ಪ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಬಿ ಪರಮೇಶ್ವರ್, ಪಶುಪತಿರಾವ್, ವೆಂಕಟೇಶ್ ಲಾಡ್, ಬಿ.ಸಿ.ಶ್ರೀನಿವಾಸ್, ಬೇವಿನಳ್ಳಿ ಮೋಕ್ಷರಾಜ್, ಪ್ಯಾರೂ ಜಾನ್, ಭೂದೇವಸ್ವಾಮಿ ಒಡೆಯರ್, ಚಿಕ್ಕಣ್ಣಾಚಾರ್ ಇತರರಿದ್ದರು.