ಅರಕಲಗೂಡು ತಾಲೂಕು ರಾಮನಾಥಪುರ ಶ್ರೀಪಟ್ಟಾಭಿರಾಮ ದೇವಾಲಯದಲ್ಲಿ ಶ್ರೀರಾಮ ನವಮಿ ಸಂಗೀತೋತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 
ಹಾಸನ

ಶ್ರೀರಾಮನ ನವಮಿ ಸಂಗೀತೋತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • Sri Ramana Navami
ಅರಕಲಗೂಡು: ತಾಲೂಕಿನ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ಕಳೆದ 10 ದಿನಗಳ ಕಾಲ ಜರುಗಿದ ಶ್ರೀರಾಮನ ನವಮಿ ಸಂಗೀತೋತ್ಸವ ಸಂಪನ್ನಗೊಂಡಿತು.
ವಿವಿಧ ರಾಜ್ಯಗಳಿಂದ ಆಗಮಿಸಿದ ಸಂಗೀತ ವಿದ್ವಾಂಸರು ಸಂಗೀತ ಹಾಗೂ ಭರತನ್ಯಾಟ್ಯ, ನಿತ್ಯ ಉತ್ಸವ, ವಿಶೇಷ ಪೂಜಾ ಕೈಂಕರ್ಯ ನಡೆಸಿಕೊಟ್ಟರು. ದೇವಾಲಯ ಮಾಡಿದ್ದ ವಿಶೇಷ ಅಲಂಕಾರ ಭಕ್ತರ ಮನ ಸೆಳೆಯಿತು. ಪ್ರತಿನಿತ್ಯ ಬಂದಂತಹ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಹತ್ತು ದಿನದ ಸಂಗೀತೋತ್ಸವಕ್ಕೆ ಸಹಕರಿಸಿದ ಕಲಾಭಿಮಾನಿಗಳು ಹಾಗೂ ಭಕ್ತರನ್ನು ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಆರ್.ಆರ್.ಶ್ರೀನಿವಾಸ್ ಗೌರವಿಸಿದರು.
ದೇವಾಲಯ ಸಮಿತಿ ಮಾಜಿ ಸಂಘಟಕ ಆರ್.ಎಸ್. ನರಸಿಂಹಮೂರ್ತಿ, ಆರ್.ಕೆ. ಶ್ರೀನಿವಾಸ್, ಶ್ರೀರಾಮ ಸಮಿತಿ ಆಧ್ಯಕ್ಷ ಬದರೀನಾಥ್, ಸದಸ್ಯರಾದ ಎಸ್.ಶ್ರೀನಿವಾಸ್, ಆರ್.ಎಸ್. ತಿರುಮಲಾಚಾರ್, ಕೃಷ್ಣಯ್ಯಂಗಾರ್, ಶ್ರೀನಿಧಿ, ಮೋಹನ್, ನಾಗರಾಜು, ವತ್ಸಲಾ, ಸತೀಶ್, ಲಕ್ಷ್ಮೀಕಾಶಿ ಮುಂತಾದವರು ಉಪಸ್ಥಿತರಿದ್ದರು. ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಿವಾಸ್ ಭಟ್ಟರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.