ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ 7ನೇ ದಿನದ ಶ್ರೀ ರಾಮನವಮಿ ಸಂಗಿತೋತ್ಸವದಲ್ಲಿ ವಿದ್ವಾನ್ ವಿವೇಕ್ ಮೋಜೀಕುಳಂ ಸಂಗೀತ ಕಛೇರಿ ನಡೆಸಿಕೊಟ್ಟರು.
ಅರಕಲಗೂಡು: ಬದುಕಿನ ಮೋಕ್ಷ ಸಾಧನೆಗೆ ಹಾಡುಗಾರಿಕೆ, ಸಂಗೀತ ಹಾಗೂ ಭಕ್ತಿಯೋಗವೊಂದೇ ನಿಜವಾದ ಮಾರ್ಗವಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ತಿರುಮಲಚಾರ್ ಅಭಿಪ್ರಾಯಪಟ್ಟರು.
ತಾಲೂಕಿನ ರಾಮನಾಥಪುರದ ಪಟ್ಟಾಭಿರಾಮ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿರುವ 7 ನೇ ದಿನದ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂಗೀತ ಮತ್ತು ಸಾಹಿತ್ಯ ಒಂದೇ. ಸಮಾಜ ಪರಿವರ್ತನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಸಂಗೀತ ವಿದ್ವಾಂಸರು ಹಾಕಿಕೊಟ್ಟ ಅವರ ಸಂಗೀತವನ್ನು ನಾವಿಂದು ಪ್ರಾಮಾಣಿಕವಾಗಿ ಮುನ್ನಡೆಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಹೇಳಿದರು.
ವಿದ್ವಾನ್ ವಿವೇಕ್ ಮೋಜೀಕುಳಂ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು. ದಿ.ಸಿ.ಕೆ.ಜನಾರ್ದನ ಅಯ್ಯಂಗಾರ್ ಮಕ್ಕಳು,ಸಿ.ಜೆ.ವಿ.ಕೃಷ್ಣ ಮತ್ತು ಸಹೋದರರು, ಪುತ್ತೂರು ಶ್ರೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ, ನಾರಾಯಣ ಅಯ್ಯಂಗಾರ್ ಕಾರ್ಯಕ್ರಮಗಳ ವ್ಯವಸ್ಥೆ ಮಾಡಿಸಿದ್ದರು.