ಆಲೂರು ತಾಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಂಪುರ ಗ್ರಾಮದ ನಂಜೇದೇವರ ಕಾವಲಿನಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ನಂಜುಂಡೇಶ್ವರಸ್ವಾಮಿ ಸುಕ್ಷೇತ್ರದಲ್ಲಿ ಸೋಮವಾರ 75ನೇ ಹುಣ್ಣಿಮೆ ಅಮೃತ ಸುವರ್ಣ ಮಹೋತ್ಸವ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಆಲೂರು: ತಾಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೊಂಪುರ ಗ್ರಾಮದ ನಂಜೇದೇವರ ಕಾವಲಿನಲ್ಲಿ ನೆನೆಸಿರುವ ಪುರಾಣ ಪ್ರಸಿದ್ಧ ಶ್ರೀ ನಂಜುಂಡೇಶ್ವರಸ್ವಾಮಿ ಸುಕ್ಷೇತ್ರದಲ್ಲಿ ಸೋಮವಾರ 75ನೇ ಹುಣ್ಣಿಮೆ ಅಮೃತ ಸುವರ್ಣ ಮಹೋತ್ಸವ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಜೂ.29ರ ಸೋಮವಾರ ಬೆಳಗ್ಗೆ ಶ್ರೀ ನಂಜುಂಡೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವಮೂರ್ತಿ ಆಗಮನದೊಂದಿಗೆ ಬೆಳಗ್ಗೆ 6.30ರಿಂದ ಗಂಗಾ ಪೂಜೆಯೊಂದಿಗೆ ಪ್ರಾರಂಭಗೊಂಡು ಪೂಜಾ ವಿಧಿ-ವಿಧಾನಗಳು. ಬೆಳಗ್ಗೆ 7.30ರಿಂದ ಬೆಳಗ್ಗೆ 9.30 ರವರೆಗೆ ಮಹಾ ರುದ್ರಾಭೀಷೇಕ ನಡೆದವು. ಬೆಳಗ್ಗೆ 9.30ರಿಂದ ಸ್ವಾಮಿಗೆ ವಿಶೇಷವಾಗಿ ರಾಜೋಪಚಾರ ಪೂಜಾ ಕಾರ್ಯಕ್ರಮ ಬೆಳಗ್ಗೆ 10.30 ರವರೆಗೂ ಜರುಗಿದವು. ಸ್ಥಳೀಯರು ಅಲ್ಲದೆ ಹಾಸನ ಹಾಗೂ ಆಲೂರು ತಾಲೂಕಿನ ವಿವಿಧ ಗ್ರಾಮಗಳಿಂದ ಸಕಲಕ್ಕೆ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು.
ನಂತರ ದೇಗುಲಕ್ಕೆ ಆಗಮಿಸಿದ ಎಲ್ಲ ಸಬ್ಬಕ್ತರಿಗೂ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.