ಹೊಳೆನರಸೀಪುರ ತಾಲೂಕಿನ ತಾತನಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಿಯ ಜಾತ್ರೋತ್ಸವ ನಡೆಯಿತು. 
ಹಾಸನ

ತಾತನಹಳ್ಳಿಯಲ್ಲಿ ಶ್ರೀ ಲಕ್ಷ್ಮೀ ದೇವಿ ಸಿಡಿ ಹಬ್ಬ

ಹೊಳೆನರಸೀಪುರ: ತಾಲೂಕಿನ ತಾತನಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಿಯ ಸಿಡಿ ಹಬ್ಬದ ಜಾತ್ರೆ ಸಡಗರ ಸಂಭ್ರಮದಿಂದ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು.
ಶುಕ್ರವಾರದಿಂದ ಶ್ರೀ ಲಕ್ಷ್ಮೀ ದೇವಿಯ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಪ್ರಾರಂಭಗೊಂಡು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು. ತಾತನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಭಾಗಿಯಾಗಿದ್ದರು. ಲಕ್ಷ್ಮೀ ದೇವಿಯ ಜಾತ್ರೋತ್ಸವದ ಸಿಡಿಗಳನ್ನು ಜೋಡಿಸಿ, ಹೂವು, ಹಣ್ಣಿನ ಅಲಂಕಾರದಿಂದ ಸಿದ್ಧಪಡಿಸಿ ಪೂಜೆ ನೆರವೇರಿಸುವ ಮೂಲಕ ಭಕ್ತಾದಿಗಳು ಒಟ್ಟುಗೂಡಿ ದೇವಸ್ಥಾನದ ಬಳಿ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.