ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನಗೊಂಡ ಬಳಿಕ ಖಜಾನೆಗೆ ಚಿನ್ನಾಭರಣಗಳನ್ನು ಮರಳಿಸಲಾಯಿತು. ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಅಧಿಕಾರಿಗಳು, ಪೊಲೀಸರು ಇದ್ದರು. 
ಹಾಸನ

ಖಜಾನೆಗೆ ಮರಳಿದ ಶ್ರೀಚನ್ನಕೇಶವಸ್ವಾಮಿ ಚಿನ್ನಾಭರಣ

ಪ್ರಮುಖ ಮುಖ್ಯಾಂಶಗಳು

  • Sri Channakesavaswamy
ಬೇಲೂರು: ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಖಜಾನೆಯಿಂದ ದೇಗುಲಕ್ಕೆ ತಂದಿದ್ದ ದೇವರ ಚಿನ್ನಾಭರಣಗಳನ್ನು ಜಾತ್ರೆ ಸಂಪನ್ನಗೊಂಡ ಕಾರಣ ಪೊಲೀಸ್ ಬಂದೋಬಸ್ತ್‌ನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿರುವ ಖಜಾನೆಗೆ ಮರಳಿಸಲಾಯಿತು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಶ್ರೀಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು. ಇದೀಗ ಉತ್ಸವದ ಸಮಾಪ್ತಿಯೊಂದಿಗೆ ದೇವರಿಗೆ ಅಲಂಕರಿಸಿದ್ದ ಬಂಗಾರದ ಆಭರಣಗಳನ್ನು ಸುರಕ್ಷಿತವಾಗಿ ಪೊಲೀಸರ ಸಮ್ಮುಖದಲ್ಲಿ ತಂದು ಖಜಾನೆಯಲ್ಲಿ ಇರಿಸಲಾಗುತ್ತಿದೆ. ಮುಂದಿನ ಜಾತ್ರೆಯವರೆಗೆ ಅವುಗಳನ್ನು ಸೀಲ್ ಮಾಡಿ ಸೂಕ್ತ ಭದ್ರತೆಯೊಂದಿಗೆ ಇಡಲಾಗುವುದು ಎಂದು ತಿಳಿಸಿದರು. ದೇಗುಲ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಮತ್ತು ಪೊಲೀಸರು ಇದ್ದರು.