ಹೊಳೆನರಸೀಪುರ ಪಟ್ಟಣದ ಸೋಶಿಯಲ್ ಕ್ಲಬ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಚಾಲನೆ. ರವೀಶ್, ಅಶೋಕ್, ಮುರಳೀಧರ್ ಗುಪ್ತ ಕುಮುದ ಇದ್ದರು. 
ಹಾಸನ

ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ವಕೀಲರ ರವೀಶ್ ಅಭಿಪ್ರಾಯ
  • ಬೇಸಿಗೆ ಶಿಬಿರ
ಹೊಳೆನರಸೀಪುರ: ದೇಶೀಯ ಕ್ರೀಡೆಗಳು ಮತ್ತು ಹಳ್ಳಿಯ ಜಾನಪದ ಸೊಗಡಿನ ಕಲೆಗಳು, ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಜೀವನಾಡಿಗಳಾಗಿದ್ದು, ದೈಹಿಕ ಮತ್ತು ಮಾನಸಿಕ ಸದೃಢತೆಯನ್ನು ತಂದು ಕೊಡುತ್ತದೆ ಎಂದು ವಕೀಲರ ರವೀಶ್ ತಿಳಿಸಿದರು.
ಪಟ್ಟಣದ ಸೋಶಿಯಲ್ ಕ್ಲಬ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಒಳಗಿರುವ ಸೃಜನಶೀಲತೆ ಮತ್ತು ಕಲಾ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡುವ ವೇದಿಕೆಗಳಾಗಿ ಬೇಸಿಗೆ ಶಿಬಿರಗಳು ರೂಪುಗೊಳ್ಳಬೇಕು. ಆಧುನಿಕ ಸಾಮಾಜಿಕ ವ್ಯವಸ್ಥೆಯನ್ನು ನಮ್ಮ ಮೂಲ ದೇಶೀಯ ಕ್ರೀಡೆಗಳು, ಜಾನಪದ ಕಲೆಗಳು ಕಣ್ಮರೆಯಾಗುತ್ತಿದೆ. ನಗರೀಕರಣವಾಗಿ ಸಾವಿರಾರು ಕಾಂಕ್ರೀಟಿನ ಕಟ್ಟಡಗಳು ತಲೆ ಎತ್ತಿ ಬೆಂಗಳೂರು, ಮೈಸೂರು ಇನ್ನಿತರ ಕಡೆಗಳಲ್ಲಿ ಹಳ್ಳಿಯ ವಾತಾವರಣ ಮಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಕೀಲ ಅಶೋಕ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕದ ನೂತನ ಅಧ್ಯಕ್ಷ ಮುರಳೀಧರ ಗುಪ್ತ, ಕಾರ್ಯದರ್ಶಿ ಆರ್.ಕುಮುದಾ, ವಿಜಯಕುಮಾರಿ, ಗೈಡ್ ಕ್ಯಾಪ್ಟನ್ ರಂಗಮ್ಮ, ನಾಗಾರ್ಜುನ್ ಇತರರು ಇದ್ದರು.