ಕಂದಲಿ ಬಳಿಯ ನೌಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೃತ್ತಿ ಭಾಷಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವೇಣುಗೋಪಾಲ್ ರಾವ್, ಪ್ರಶಾಂತ್ ಕುಮಾರ್, ರಾಮೇಗೌಡ, ಗಣಪತಿ, ರಾಜಲಕ್ಷ್ಮೀ ಇತರರು ಇದ್ದರು. 
ಹಾಸನ

ಯಶಸ್ಸಿಗೆ ನಿರ್ದಿಷ್ಟ ಗುರಿ ಮುಖ್ಯ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಯಶಸ್ಸಿಗೆ ನಿರ್ದಿಷ್ಟ ಗುರಿ ಮುಖ್ಯ
  • ಪ್ರಾಂಶುಪಾಲ ವೇಣುಗೋಪಾಲ್ ರಾವ್ ಹೇಳಿಕೆ
ಹಾಸನ: ಜೀವನದಲ್ಲಿ ತಾವು ಏನಾಗಬೇಕು ಎಂಬ ಗುರಿ ಇಟ್ಟುಕೊಂಡು ಆ ಗುರಿ ತಲುಪುವ ಸಲುವಾಗಿ ಪ್ರಯತ್ನಿಸಿದರೆ ಯಶಸ್ಸು ಕಾಣಲು ಸಾಧ್ಯ ಎಂದು ನೌಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಪ್ರಾಂಶುಪಾಲರಾದ ವೇಣುಗೋಪಾಲ್ ರಾವ್ ಹೇಳಿದರು.
ಕಂದಲಿ ಬಳಿಯ ನೌಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವೃತ್ತಿ ಭಾಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜ್ಞಾನ ಹೆಚ್ಚಿಸಿಕೊಂಡಲ್ಲಿ ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ವೇಗದಲ್ಲಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಪ್ರತಿಯೊಂದು ವಿಚಾರದಲ್ಲಿ ವೇಗ ಹೆಚ್ಚಾಗುತ್ತಿದೆ. ಅದಕ್ಕನುಗುಣವಾಗಿ ಇಂದಿನ ಯುವ ಪೀಳಿಗೆ ಪೂರಕ ಶೈಕ್ಷಣಿಕ ಶಕ್ತಿ ಪಡೆದುಕೊಳ್ಳುವ ಅಗತ್ಯವಿದೆ. ಹಾಗಾಗಿ ಎಲ್ಲವನ್ನೂ ಒಂದೇ ಸೂರಿನಲ್ಲಿ ಒದಗಿಸುವ ಸಲುವಾಗಿ ಎಂ.ಎಸ್ ರಾಮಯ್ಯ ನೌಕಿಸ್ ಕಾಲೇಜು ಒದಗಿಸುತ್ತಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲರಾದ ಸಂಘದ ಅಧ್ಯಕ್ಷ ಪ್ರಶಾಂತ್ ಕುಮಾರ್, ಚ.ರಾ.ಪ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ರಾಮೇಗೌಡ, ಗಣಪತಿ, ಸಂಸ್ಥೆಯ ಸಿಬ್ಬಂದಿ ರಾಜಲಕ್ಷ್ಮೀ ಇತರರು ಇದ್ದರು.