ಗಣರಾಜ್ಯೋತ್ಸವದ ಅಂಗವಾಗಿ ಸಕಲೇಶಪುರ ಪುರಭವನದ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಮುಖಂಡರು ಭಾಗವಹಿಸಿ ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಪ್ರತಿಜ್ಞೆಯನ್ನು ಮಾಡಿದರು.  
ಹಾಸನ

ಸಾಮರಸ್ಯದಿಂದ ಸುಧಾರಣೆ ಸಾಧ್ಯ

ಸಕಲೇಶಪುರ : ಸಾಮರಸ್ಯದಿಂದ ಸುಧಾರಣೆ ಸಾಧ್ಯ ಎಂದು ಮುಸ್ಲಿಂ ಧಾರ್ಮಿಕ ಮುಖಂಡ ನಯೀಮ್ ಫೈಝಿ ಅಲ್ ಮಬರಿ ಹೇಳಿದರು.
ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪುರಭವನದ ಮುಂಭಾಗ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ಸಂವಿಧಾನವು ದೇಶದ ಭೌಗೋಳಿಕ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ.
ದೇಶವು ಹೇಗೆ ಮುನ್ನಡೆಯಬೇಕು ಎಂಬ ದಿಕ್ಕು ನೀಡುವ ಶ್ರೇಷ್ಠ ದಾಖಲೆ ಎಂದರು. ಭಾರತವು ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ ರಾಷ್ಟ್ರವಾಗಿದೆ. ವಿವಿಧ ಭಾಷೆ, ಸಂಸ್ಕೃತಿ, ಧರ್ಮ, ಆಹಾರ ಪದ್ಧತಿ ಹಾಗೂ ಆಚಾರ-ವಿಚಾರಗಳ ವಿಶೇಷತೆ ಭಾರತದಲ್ಲಿದೆ ಎಂದರು. ಈ ಸಂದರ್ಭ ಮಾನವ ಸರಪಳಿ ನಿರ್ಮಿಸಿ, ಪರಸ್ಪರ ಕೈ ಹಿಡಿದು ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಪ್ರತಿಜ್ಞೆಯನ್ನು ಮಾಡಲಾಯಿತು.