ಸುದ್ದಿಗೋಷ್ಠಿಯಲ್ಲಿ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಹುಡಾ ಆಯುಕ್ತ ರಮೇಶ್, ಶಿವಕುಮಾರ್ ಇದ್ದರು.
- ಜೂ.18ರಂದು ಇ-ಲಾಟರಿ ಮೂಲಕ ನಿವೇಶನ ಹಂಚಿಕೆ
- ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಮಾಹಿತಿ
ಹಾಸನ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ವತಿಯಿಂದ ಬೂವನಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ ಮತ್ತು ಕೆಂಚಟ್ಟಹಳ್ಳಿ (ಬಿಜಿಎಸ್‌ಕೆ) ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ನಿವೇಶನಗಳನ್ನು ಜೂ.18ರಂದು ಹಂಚಿಕೆ ಮಾಡಲಾಗುವುದು ಎಂದು ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ತಿಳಿಸಿದರು.
1836 ರೈತರು ನೀಡಿರುವ 1145 ಎಕರೆ 32 ಗುಂಟೆ ಭೂ ಪ್ರದೇಶದಲ್ಲಿ 890 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲೇ ಹೈಟೆಕ್ ಮತ್ತು ಸುಂದರವಾದ ಬಡಾವಣೆ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಶೇ.80ರಷ್ಟು ಕೆಲಸ ಮುಗಿದಿದೆ. ಇಲ್ಲಿ ಒಟ್ಟು 13,909 ನಿವೇಶನ ಹಂಚಿಕೆಗೆ ಲಭ್ಯವಿದ್ದು, ಇವುಗಳನ್ನು ಇ-ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರೈತರು ಹಾಗೂ ಪ್ರಾಧಿಕಾರದ ಸಹಭಾಗಿತ್ವದಲ್ಲಿ 50:50 ಅನುಪಾತದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದು ರಾಜ್ಯದಲ್ಲೇ ಮಾದರಿ ಯೋಜನೆಯಾಗಿ ರೂಪುಗೊಂಡಿದೆ. ಸಮರೋಪಾದಿಯಲ್ಲಿ ಕೆಲಸ ಆಗಿದೆ. ಎಸ್‌ಎಂಕೆ ನಗರದಲ್ಲಿ ಸ್ಮಶಾನ ಇಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಬೂವನಹಳ್ಳಿ ಬಳಿ 3 ಎಕರೆ ಪ್ರದೇಶದಲ್ಲಿ ಹೈಟೆಕ್ ಸ್ಮಶಾನ ಸಹ ನಿರ್ಮಿಸಲಾಗಿದೆ. 80, 40, 30 ಅಡಿಯ ರಸ್ತೆಗಳನ್ನು ನಿರ್ಮಿಸಲಾಗಿದೆ. ಕುಡಿಯುವ ನೀರಿನ ಯೋಜನೆಗೆ ರೈಲ್ವೆ ಇಲಾಖೆಯ ಒಂದು ಅನುಮತಿ ಸಿಕ್ಕಿದೆ, ಮತ್ತೊಂದು ಅನುಮತಿ ಹಂತದಲ್ಲಿದೆ. 220 ಮತ್ತು 63 ಕೆವಿ ವಿದ್ಯುತ್ ಸ್ಟೇಷನ್ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ, ಕುಡಿಯುವ ನೀರು, ಒಳಚರಂಡಿ, ಮಳೆ ನೀರು ಹರಿವು ವ್ಯವಸ್ಥೆ, ವಿದ್ಯುತ್, ಉದ್ಯಾನ, ನಾಗರಿಕ ಸೌಲಭ್ಯಗಳು ಸೇರಿದಂತೆ ಸಮಗ್ರ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. 13,909 ನಿವೇಶನಗಳು ಹಂಚಿಕೆಗೆ ಲಭ್ಯವಿದ್ದು, ಈ ಪೈಕಿ ರೈತರಿಗೆ 7200, ಅರ್ಜಿ ಹಾಕಿರುವವರಿಗೆ 5935, ು ೂ ೆ / ಾ ಣಿ ಜ ್ಯ ನಿವೇಶನಗಳು 1265 ಇದ್ದು ಇ-ಹರಾಜು ಮಾಡಲಾಗುವುದು. ನಿವೇಶನಕ್ಕಾಗಿ 27,821 ಜನ ಅರ್ಜಿ ಹಾಕಿದ್ದಾರೆ. ಇವರಲ್ಲಿ ಒಂದೇ ಕುಟುಂಬದ ಹಲವರು ಅರ್ಜಿ ಹಾಕಿದ್ದಾರೆ ಎಂದರು.
ನಿವೇಶನ ಹಂಚಿಕೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹಾಜರಿರುವರು. ಅಂದು ನಗರದ ಕಲಾಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಸರ್ಕಾರದ ನಿಯಮಾವಳಿ ಹಾಗೂ ಮೀಸಲಾತಿ ಅನ್ವಯ ಪಾರದರ್ಶಕವಾಗಿ ಸೈಟ್ ಹಂಚಿಕೆ ಮಾಡಲಾಗುವುದು ಎಂದರು.
ಸಾರ್ವಜನಿಕರಿಗೆ ಹಂಚಿಕೆ ಮಾಡಲು ಲಭ್ಯವಾಗುವ ಒಟ್ಟು 5935 ನಿವೇಶನಗಳನ್ನು ವರ್ಗವಾರು ನಿವೇಶನ ಮಾಡಲು ಕ್ರಮವಹಿಸಲಾಗಿದೆ. ಅಂತೆಯೇ ಹಿಂದುಳಿದ ಪಂಗಡಗಳು ಪ್ರವರ್ಗ-1 (ಬಿಟಿ) ಶೇ.2 ರಷ್ಟು, ಅನುಸೂಚಿತ ಬುಡಕಟ್ಟು(ಎಸ್‌ಟಿ) ಶೇ.6.55, ಅನುಸೂಚಿತ ಜಾತಿ(ಎಸ್‌ಸಿ) ಶೇ.16.2, ಮಾಜಿ ಸೈನಿಕರು ಅಥವಾ ಮೃತ ಸೈನಿಕರ ಕುಟುಂಬದ ಸದಸ್ಯರು ಮತ್ತು ಕೇಂದ್ರ ಶಸ್ತ್ರ ಪಡೆಯ ಸದಸ್ಯರು ಶೇ.7.75,ರಾಜ್ಯ ಸರ್ಕಾರ, ನಿಗಮ ಸಾರ್ವಜನಿಕ ವಲಯ ಉದ್ದಿಮೆಗಳು ಮತ್ತು ಶಾಸನ ಪದತ್ತ ಪ್ರಾಧಿಕಾರಿಗಳ ನೌಕರರು ಶೇ.7.50, ಕೇಂದ್ರ ಸರ್ಕಾರದ ಸಾರ್ವಜನಿಕ ವಲಯ ಉದ್ದಿಮೆ ಗಳು/ ನಿಗಮ ಮತ್ತು ಶಾಸನ ಪ್ರದತ್ತ ಪ್ರಾಧಿಕಾರಗಳ ನೌಕರರು ಶೇ.5, ಸಾರ್ವಜನಿಕರು ಶೇ.50, ಕಲೆ, ವಿಜ್ಞಾನ, ಕ್ರೀಡೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಶೇ.3 ಮತ್ತು ಅಂಗವಿಕಲರಿಗೆ ಶೇ.2 ರಷ್ಟು ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು, ತುಮಕೂರು, ಮೈಸೂರು ಮಧ್ಯೆ ಇರುವ ಹಾಸನ ನಗರದ ಭವಿಷ್ಯದ ವಿಸ್ತರಣೆ ಗಮನದಲ್ಲಿಟ್ಟುಕೊಂಡು ಈಯೋಜನೆ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಪ್ರಮುಖ ವಸತಿ ಬಡಾವಣೆಯಾಗಿ ಬೆಳೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹುಡಾ ಆಯುಕ್ತ ರಮೇಶ್, ಶಿವಕುಮಾರ್ ಇದ್ದರು.
ಯಾವ ಅಳತೆಯ ಎಷ್ಟು ಸೈಟ್ ಲಭ್ಯ?