ಅರಸೀಕೆರೆ ಮಾರುತಿ ನಗರ ಬಡಾವಣೆಯ ದೇಗುಲದಲ್ಲಿ ಎಸ್ ಐ ಆರ್ ನಡೆಯುತ್ತಿರುವುದು.
ಅರಸೀಕೆರೆ: ಮಾರುತಿ ನಗರ ಬಡಾವಣೆಯಲ್ಲಿರುವ ಮಾರುತಿ ದೇಗುಲದಲ್ಲಿ ಎಸ್‌ಐಆರ್ ನಡೆಯುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಶನಿವಾರ ಸ್ಥಳಕ್ಕೆ ದೌಡಾಯಿಸಿದ ಜೆಡಿಎಸ್, ಬಿಜೆಪಿಯ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಲೋಪ ಸರಿಪಡಿಸಲು ಮುಂದಾಗದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಅವರಿಗೂ ಮೊಬೈಲ್ ಕರೆ ಮಾಡಿ ದೂರು ನೀಡಿದ್ದಾರೆ. ಸಾಮೂಹಿಕ ಎಸ್‌ಐಆರ್ ವೀಡಿಯೋ ವೈರಲ್ ಆಗಿದೆ.