ಚನ್ನರಾಯಪಟ್ಟಣದಲ್ಲಿ ಆಯೋಜಿಸಿರುವ ಟಗರು ಕಾಳಗ ಕುರಿತಂತೆ ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಕಬ್ಬಾಳು ಮಾಹಿತಿ ನೀಡಿದರು. ಆನ್ಸರ್ ಬೇಗ್, ಬಾಲು, ಹರೀಶ್ ಇದ್ದರು. 
ಹಾಸನ

ಸಿದ್ದು ದೀರ್ಘಾವಧಿ ಸಿಎಂ ಸಾಧನೆ ಟಗರು ಕಾಳಗ

ಪ್ರಮುಖ ಮುಖ್ಯಾಂಶಗಳು

  • fighting-the-bull
ಚನ್ನರಾಯಪಟ್ಟಣ: ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಕರ್ತವ್ಯ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಜೂ.13ರಂದು ರಾಜ್ಯಮಟ್ಟದ ಟಗರು ಕಾಳಗ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ್ ಕಬ್ಬಾಳು ಹೇಳಿದರು.
ಗ್ಯಾರಂಟಿ ಯೋಜನೆಗಳೊಂದಿಗೆ ಜನಪರವಾದ ಕೆಲಸ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆ, ಹರಿಹರ, ರಾಣಿಬೆನ್ನೂರು, ಚಿತ್ರದುರ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆಗಳಿಂದ 350ಕ್ಕೂ ಹೆಚ್ಚು ಕಾಳಗದ ಟಗರುಗಳು ಆಗಮಿಸಲಿವೆ. 2, 4 ಹಾಗೂ 8 ಹಲ್ಲುಗಳ ಆಧಾರದ ಮೇಲೆ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ರಾಷ್ಟ್ರೀಯ ಅಹಿಂದ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಜಬಿವುಲ್ಲಾ ಬೇಗ್ ಮಾತನಾಡಿ, 2 ಹಲ್ಲಿನ ಕಾಳಗದಲ್ಲಿ ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ ಬಹುಮಾನ 10 ಸಾವಿರ ರೂ., 6 ಹಲ್ಲಿನ ಕಾಳಗದಲ್ಲಿ ಪ್ರಥಮ ಬಹುಮಾನವಾಗಿ ದ್ವಿಚಕ್ರ ವಾಹನ, ದ್ವಿತೀಯ 40 ಸಾವಿರ ರೂ. ಮತ್ತು ತೃತೀಯ 25 ಸಾವಿರ ರೂ. ಹಾಗೂ 4 ಹಲ್ಲಿನ ಕಾಳಗದಲ್ಲಿ ಪ್ರಥಮ ಬಹುಮಾನವಾಗಿ ಎಲೆಕ್ಟ್ರಿಕ್ ಬೈಕ್, ದ್ವಿತೀಯ 25 ಸಾವಿರ ರೂ. ಹಾಗೂ ತೃತೀಯ ಸ್ಥಾನಕ್ಕೆ 15 ಸಾವಿರ ರೂ. ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಜೂ.13 ರಂದು ಬೆಳಗ್ಗೆ 10.30ಕ್ಕೆ ಸ್ಪರ್ಧೆ ಪ್ರಾರಂಭವಾಗಲಿದ್ದು, ಟಗರು ಕಾಳಗಕ್ಕೆ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್, ಶಾಸಕ ಶಿವಲಿಂಗೇಗೌಡ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಘಟನೆಯ ಪದಾಧಿಕಾರಿಗಳಾದ ಆನ್ಸರ್ ಬೇಗ್, ಬಾಲು, ಹರೀಶ್ ಹಾಗೂ ಇತರರು ಇದ್ದರು.