ಸಂಸದ ಶ್ರೇಯಸ್ ಪಟೇಲ್ ಅವರು ತಮ್ಮ ಲೋಕಸಭಾ ಸದಸ್ಯರ ಅನುದಾನದಲ್ಲಿ ಫಲಾನುಭವಿಗಳಿಗೆ ಬೈಕ್, ಶ್ರವಣ ಸಾಧನ ಮೊದಲಾದ ಸವಲತ್ತು ವಿತರಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಡಿಸಿ ಲತಾಕುಮಾರಿ ಇತರರು ಇದ್ದರು.
ಹಾಸನ: ಸಂಸದ ಶ್ರೇಯಸ್ ಪಟೇಲ್ ತಮ್ಮ ತಮ್ಮ ಲೋಕಸಭಾ ಸದಸ್ಯರ ಅನುದಾನದಲ್ಲಿ ಫಲಾನುಭವಿಗಳಿಗೆ ದ್ವಿಚಕ್ರವಾಹನ, ಶ್ರವಣ ಸಾಧನ ಮೊದಲಾದ ಸವಲತ್ತುಗಳನ್ನು ವಿತರಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿ ಎ.ಕಾಳೇನಹಳ್ಳಿ ಗ್ರಾಮದ ಕು.ಚಂದನಾ, ಹೊಳೆನರಸೀಪುರ ಪಟ್ಟಣದ ವಾರ್ಡ್ ನಂ.17 ಕಾರಂಜಿ ಕಟ್ಟೆ ಬಡಾವಣೆಯ ಗೋವಿಂದಯ್ಯ ಅವರಿಗೆ ಶ್ರವಣ ಸಾಧನ ಯಂತ್ರೋಪಕರಣ ವಿತರಿಸಿದರು.
ಹೊಳೆನರಸೀಪುರ ತಾಲೂಕಿನ ದೊಡ್ಡ ಕಾಡನೂರು ಗ್ರಾಮದ ಎಂ.ಮಹೇಶ್, ಹಾಸನ ತಾಲೂಕು ಚಿಕ್ಕಗೇಣಿಗೆರೆ ಗ್ರಾಮದ ಸಂಪತ್ ಕುಮಾರ್ ಅವರಿಗೆ ತ್ರಿಚಕ್ರ ವಾಹನ ವಿತರಿಸಿದರು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.