ಭಗವಾನ್ ಶ್ರೀಸತ್ಯಸಾಯಿ ಬಾಬಾ ಅವರ 15ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಸತ್ಯಸಾಯಿ ಟ್ರಸ್ಟ್ ಪದಾಧಿಕಾರಿಗಳು ಭಕ್ತರಿಗೆ ಅನ್ನದಾನ ಏರ್ಪಡಿಸಿದ್ದರು. 
ಹಾಸನ

ಸತ್ಯಸಾಯಿ ಬಾಬಾ 15ನೇ ವರ್ಷದ ಆರಾಧನಾ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • Sathya Sai Baba's
ಬೇಲೂರು: ಭಗವಾನ್ ಶ್ರೀಸತ್ಯಸಾಯಿ ಬಾಬಾ ಅವರ 15ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಸತ್ಯಸಾಯಿ ಟ್ರಸ್ಟ್ ಹಾಗೂ ಶ್ರೀಸತ್ಯಸಾಯಿ ಸೇವಾ ಸಂಸ್ಥೆಯಿಂದ ಪಟ್ಟಣದ ಶ್ರೀಚನ್ನಕೇಶವಸ್ವಾಮಿ ದೇಗುಲದ ಹಿಂಭಾಗದಲ್ಲಿರುವ ಸಂತೆ ಸಮೀಪ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಶ್ರೀಸತ್ಯಸಾಯಿ ಟ್ರಸ್ಟ್ ಅಧ್ಯಕ್ಷ ಇಂದ್ರೇಶ್ ಮಾತನಾಡಿ, ಭಗವಾನ್ ಶ್ರೀಸತ್ಯಸಾಯಿ ಬಾಬಾ ಜಗತ್ತು ಕಂಡ ಮಹಾನ್ ಪುರುಷರು. ಅವರು ಸಾರ್ವಜನಿಕರ ಸೇವೆ ಮಾಡುವುದಕ್ಕಾಗಿ ಹಲವಾರು ಕಾರ್ಯಗಳನ್ನು ರೂಪಿಸಿಕೊಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಉಚಿತ ಶಿಕ್ಷಣ, ಸಾರ್ವಜನಿಕ ಆಸ್ಪತ್ರೆಗಳನ್ನು ಕಟ್ಟಿಸಿ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸಿದ್ದಲ್ಲದೆ, ಅನ್ನದಾನ, ವಿದ್ಯಾದಾನ, ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿ ಕೊಟ್ಟ ಚೇತನ. ಇಂತಹ ಚೇತನವು ದೇಹತ್ಯಾಗ ಮಾಡಿ 15 ವರ್ಷ ಕಳೆದ ಹಿನ್ನೆಲೆಯಲ್ಲಿ ಅನ್ನದಾನದ ಮೂಲಕ ಗೌರವ ಸಲ್ಲಿಸುತಿದ್ದೇವೆ ಎಂದರು.
ಶ್ರೀಸತ್ಯಸಾಯಿ ಟ್ರಸ್ಟ್ ಕಾರ್ಯದರ್ಶಿ ಬಾಳೆಹಣ್ಣು ರಮೇಶ್ ಮಾತನಾಡಿದರು. ಟ್ರಸ್ಟ್ ಸಂಚಾಲಕ ರಾಜೇಗೌಡ, ಪದಾಧಿಕಾರಿಗಳಾದ ದೇವೇಗೌಡ, ಚಂದ್ರೇಗೌಡ, ಬಸವರಾಜು, ಮಮತಾ, ಲಕ್ಷ್ಮೀ ಸೇರಿದಂತೆ ಇತರರಿದ್ದರು.