ಹೊಳೆನರಸೀಪುರ ಪಟ್ಟಣದ ದೇವಾಂಗ ಸಮುದಾಯದವರಿಂದ ಸಂಕ್ರಾಂತಿಯ ಭಜನಾ ಕಾರ್ಯಕ್ರಮ ನಡೆಯಿತು. 
ಹಾಸನ

ಸಂಕ್ರಾಂತಿ ಭಜನಾ ಕಾರ್ಯಕ್ರಮ ಸಂಪನ್ನ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ದೇವಾಂಗ ಸಮುದಾಯದವರಿಂದ ಭಜನಾ ಕಾರ್ಯಕ್ರಮ
ಹೊಳೆನರಸೀಪುರ: ಪಟ್ಟಣದ ದೇವಾಂಗ ಸಮುದಾಯದವರಿಂದ ಗುರುವಾರ ಸಂಕ್ರಾಂತಿಯ ಭಜನಾ ಕಾರ್ಯಕ್ರಮ ನಡೆಯಿತು.
ಶ್ರೀ ದೇವಾಂಗ ರಾಮ ಮಂದಿರದಲ್ಲಿ 2025ರ ಡಿ.16 ರಂದು ಪ್ರಾರಂಭವಾದ ಭಜನಾ ಕಾರ್ಯಕ್ರಮ 2026ರ ಜ.15ರ ಮಕರ ಸಂಕ್ರಾಂತಿಯಂದು ಸಂಪನ್ನವಾಯಿತು.
ಧನುರ್ಮಾಸದ ಅವಧಿಯಲ್ಲಿ ಪ್ರತಿ ವರ್ಷವೂ ಭಜನಾ ಕಾರ್ಯಕ್ರಮ ನಡೆಸುತ್ತದೆ. ಪ್ರತಿ ದಿನ ಮುಂಜಾನೆ ಸಮುದಾಯದ ಪ್ರಮುಖ ದೇವಾಲಯಗಳಾದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮತ್ತು ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಕ್ಕೆ ತೆರಳಿ ಭಜನೆ ಮಾಡಿ ಮಂಗಳಾರತಿ ಸ್ವೀಕರಿಸಲಾಗುತ್ತದೆ.
ಭಜನೆಯಲ್ಲಿ ಹಿರಿಯರು, ಮಕ್ಕಳು, ಮಹಿಳೆಯರು, ಯುವಕರು ಸೇರಿದಂತೆ ಜನಾಂಗದ ಪ್ರಮುಖರು ಸಂಗೀತ ವಾದ್ಯದೊಂದಿಗೆ ಭಕ್ತಿ ಪೂರ್ವಕ ಭಜನೆಗಳನ್ನು ಹಾಡಲಾಗುತ್ತದೆ.
ಈ ಒಂದು ತಿಂಗಳು ನಡೆಯುವ ಭಜನಾ ಕಾರ್ಯದಲ್ಲಿ ತಿರುಪತಿ, ತಮ್ಮಣ್ಣ ಶೆಟ್ಟರು, ಮಾಜಿ ಪುರಸಭೆ ಅಧ್ಯಕ್ಷ ಎ.ಜಗನ್ನಾಥ್, ಡಾ.ಎಚ್.ಎನ್.ರಾಜೇಶ್, ಮಾಜಿ ಪುರಸಭೆ ಅಧ್ಯಕ್ಷೆ ಸಿ.ಜಿ.ವೀಣಾ ರಾಜೇಶ್, ರಾಷ್ಟ್ರೀಯ ಪತ್ರಿಕಾ ಮಂಡಳಿ ಸದಸ್ಯ ಎಚ್.ವಿ.ಸುರೇಶ್ ಕುಮಾರ್, ಎಚ್.ವಿ.ರವಿಕುಮಾರ್, ಶಂಕರ್, ಸೋಮಣ್ಣ, ಅರುಣ್, ಮಂಜು, ರವಿ, ವಸಂತ್ ದೇವಾಂಗ್, ಶಿವಣ್ಣಾಚಾರ್, ಮೋಹನ್, ಯೋಗಾನಂದ, ಕಿರಣ್, ಮಂಜಣ್ಣ ಟೈಲರ್, ಕುಮಾರ್, ಚಿರಂತನ್, ವಿಕಾಸ, ಶ್ರೀಧರ್ ಇತರರು ಇದ್ದರು.