ನಗರದ ರೆಡ್‌ಕ್ರಾಸ್ ಭವನದ ಸಭಾಂಗಣದಲ್ಲಿ ಸಲೀಂ ಅಲಿ ಪಕ್ಷಿ ವೀಕ್ಷಕರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಆಯೋಜಿಸಲಾಗಿತ್ತು 
ಹಾಸನ

ಸಲೀಂ ಅಲಿ ಪಕ್ಷಿ ವೀಕ್ಷಕರ ಸಂಘದ ಸಭೆ

ಪ್ರಮುಖ ಮುಖ್ಯಾಂಶಗಳು

  • ಸಲೀಂ ಅಲಿ ಪಕ್ಷಿ ವೀಕ್ಷಕರ ಸಂಘದ ಸಭೆ
  • ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ನಿರ್ಣಯ
ಹಾಸನ: ನಗರದ ರೆಡ್‌ಕ್ರಾಸ್ ಭವನದ ಸಭಾಂಗಣದಲ್ಲಿ ಸಲೀಂ ಅಲಿ ಪಕ್ಷಿ ವೀಕ್ಷಕರ ಸಂಘದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಪಕ್ಷಿ ವೀಕ್ಷಕರ ಸಂಘದ ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಕಳೆದ 2023-24 ನೇ ಹಾಗೂ 2024-25 ನೇ ಸಾಲಿನಲ್ಲಿ ನಡೆಸಿದ ಕಾರ್ಯ ಚಟುವಟಿಕೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು.
ಶಾಲಾ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಪಕ್ಷಿ ವೀಕ್ಷಕರ ಸಂಘದ ಕಾರ್ಯಚಟುವಟಿಕೆಗಳನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಹಾಸನ ಶಾಖೆಯ ಸಂಯುಕ್ತಾಶ್ರಯದಲ್ಲಿ ನಡೆಸುವಂತೆ ಎಲ್ಲ ಸದಸ್ಯರು ಒಪ್ಪಿಗೆಯನ್ನು ನೀಡಿದರು. ನೂತನ ಅಧ್ಯಕ್ಷರನ್ನಾಗಿ ಬಿ.ಎಸ್.ದೇಸಾಯಿ, ಉಪಾಧ್ಯಕ್ಷರನ್ನಾಗಿ ಡಾ. ವೈ.ವಿ.ವಿನೋದ್, ಕಾರ್ಯದರ್ಶಿಯನ್ನಾಗಿ ಬಿ.ಆರ್. ಉದಯಕುಮಾರ್, ಖಜಾಂಚಿಯನ್ನಾಗಿ ಎಚ್.ಡಿ.ಜಯೇಂದ್ರಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಹಿಂದಿನ ಅಧ್ಯಕ್ಷ ಸುಬ್ಬಸ್ವಾಮಿ, ಹೆಮ್ಮಿಗೆ ಮೋಹನ್, ಡಾ.ಬಿ.ಸಿ.ರವಿಕುಮಾರ್, ಎಸ್.ಎಸ್ ಪಾಷಾ, ಕೆ.ಎಸ್. ರವಿಕುಮಾರ್, ಕೆ.ಟಿ. ಜಯಶ್ರೀ, ಜಯಪ್ರಕಾಶ್, ಗಿರೀಶ್, ಭೀಮರಾಜ್ ಇತರರು ಇದ್ದರು.