ಬಿ.ಹೊನ್ನೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ 10 ಲಕ್ಷ ರೂ.ವೆಚ್ಚದ ಅಂಗನವಾಡಿ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ಬಿ.ಎಚ್.ಶಿವಣ್ಣ, ಅಣ್ಣೇಗೌಡ, ಬಸವರಾಜ್, ವರಲಕ್ಷ್ಮೀ ಕಾಂತರಾಜ್, ಕೆಂಪೇಗೌಡ, ಧರಣಿ, ಜಯಲಕ್ಷ್ಮಮ್ಮ, ರಾಧಾ, ರಮ್ಯಾ, ಭಾಗ್ಯ, ಸವಿತಾ ಇದ್ದರು. 
ಹಾಸನ

ಸಂತೆಕಾಳೇಶ್ವರಿ ರಥದ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ
  • ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ
ಬಾಗೂರು: ಬಿ.ಹೊನ್ನೇನಹಳ್ಳಿ ಗ್ರಾಮ ದೇವತೆ ಸಂತೆಕಾಳೇಶ್ವರಿ ದೇವರ ರಥದ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಕೊಡಿಸುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ ನೀಡಿದರು.
ಹೋಬಳಿಯ ಬಿ.ಹೊನ್ನೇನಹಳ್ಳಿ ಗ್ರಾಮದಲ್ಲಿ ಗುರುವಾರ 10 ಲಕ್ಷ ರೂ. ವೆಚ್ಚದ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕಟ್ಟಡಕ್ಕೆ ಕಾಂಪೌಂಡ್ ಹಾಗೂ ಮುಂಭಾಗಕ್ಕೆ ಸೀಟ್ ಮಾಡಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್.ಬಸವರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪೇಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ವರಲಕ್ಷ್ಮೀ ಕಾಂತರಾಜ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಂಗಸ್ವಾಮಿ, ಯುವ ಮುಖಂಡ ಧರಣಿ, ಅಂಗನವಾಡಿ ಮೇಲ್ವಿಚಾರಕಿ ಜಯಲಕ್ಷ್ಮಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ರಮ್ಯಾ, ರಾಧಾ, ಭಾಗ್ಯಾ, ಸವಿತಾ, ರೇಣುಕಮ್ಮ, ಅನಸೂಯ, ಪ್ರೀತಿ, ಶ್ವೇತಾ, ಸೌಮ್ಯಾ, ಪದ್ಮಮ್ಮ, ದೀಪಾ, ಯಶೋದಾ ಇತರರು ಇದ್ದರು.