ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೋಟರಿ ಕ್ಲಬ್ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂತಪಾಲ ಕೆ.ಪಾಲಾಕ್ಷ, ಜಿ.ಎನ್.ಮಂಜುನಾಥ್, ಮಮತಾ ಪಾಟೀಲ್, ಟೈಮ್ಸ್ ಗಂಗಾಧರ್ ಇತರರು ಇದ್ದರು.
ಹಾಸನ: ವಲಯ 9ರ ವ್ಯಾಪ್ತಿಯಲ್ಲಿರುವ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ 2025-26ನೇ ಸಾಲಿನಲ್ಲಿ ಗುಣಮಟ್ಟದ ಸಾಮಾಜಿಕ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದು, ಸಕ್ರಿಯವಾಗಿ ಸಂಸ್ಥೆ ಕಾರ್ಯನಿರ್ವಹಿಸಿದೆ ಎಂದು 3182ರ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಪಾಲಾಕ್ಷ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಪ್ರಾಂತಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿ ರಾಯಲ್ ಈ ವರ್ಷ ವಿಶೇಷವಾಗಿ ತನ್ನ ವರ್ಷವನ್ನು ಆರಂಭಿಸಿತು, ವರ್ಷದ ಆರಂಭದಲ್ಲೇ ಸುಮಾರು 10 ಸಾವಿರ ಸಸಿಗಳನ್ನು ವಿತರಣೆ ಮಾಡುವ ಮೂಲಕ ಒಳ್ಳೆಯ ಸಂದೇಶವನ್ನು ಸಮಾಜಕ್ಕೆ ನೀಡಿದೆ. ಅದಾದ ಬಳಿಕ ಆಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳು ಗುಣಮಟ್ಟದಿಂದ ಕೂಡಿದ್ದವು. ಹಾಗಾಗಿ ಈ ವರ್ಷ ರಾಯಲ್ ಕ್ಲಬ್ ಗೆ ಪಬ್ಲಿಕ್ ಇಮೇಜ್ ಪ್ರಶಸ್ತಿ ಕೂಡ ಲಭಿಸಿದೆ. ನಮ್ಮ 3182ರ ವಲಯದಲ್ಲಿರುವ 90 ಕ್ಲಬ್‌ಗಳ ಪೈಕಿ ರಾಯಲ್ ಕ್ಲಬ್‌ಗೆ ಈ ಪ್ರಶಸ್ತಿ ದೊರೆತಿರುವುದು ಕಾರ್ಯಕ್ರಮದ ಗುಣಮಟ್ಟವನ್ನು ಪ್ರದರ್ಶಿಸುತ್ತದೆ ಎಂದರು.
ರೋಟರಿ ಸಂಸ್ಥೆಗಳು ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಇನ್ನಿತರ ಪ್ರಮುಖ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದೆ. ಪ್ರತಿಯೊಂದು ಕ್ಲಬ್‌ಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದರೆ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಸಮಾಜದಿಂದ ಗಳಿಸಿಕೊಂಡಿದ್ದನ್ನು ಪುನಾ ಸಮಾಜಕ್ಕೆ ಹಿಂದಿರುಗಿಸಿಕೊಡಬೇಕಾದಲ್ಲಿ ಪ್ರತಿಯೊಬ್ಬರೂ ರೋಟರಿಯೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ವಲಯ 9ರ ಸಹಾಯಕ ಪ್ರಾಂತಪಾಲ ಜಿ.ಎನ್.ಮಂಜುನಾಥ್ ಮಾತನಾಡಿ, 2025-26ನೇ ರೋಟರಿ ಸಾಲಿನಲ್ಲಿ ರಾಯಲ್ ಕ್ಲಬ್‌ಗೆ ನೀಡಿದ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಮಾಡಲಾಗದ ಕೆಲವು ಕಾರ್ಯಕ್ರಮಗಳನ್ನು ವಲಯ ಮಟ್ಟದಲ್ಲಿ ಮಾಡುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ರಾಯಲ್ ಕ್ಲಬ್‌ನಲ್ಲಿ ಬಹುತೇಕ ಯುವ ಸದಸ್ಯರೇ ಹೆಚ್ಚಾಗಿರುವುದರಿಂದ ಹೊಸ ಹೊಸ ಆಲೋಚನೆ, ಹೊಸ ಪರಿಕಲ್ಪನೆಯೊಂದಿಗೆ ಗುಣಮಟ್ಟದ ಕಾರ್ಯಕ್ರಮಗಳನ್ನು ಈ ವರ್ಷ ಸಮಾಜಕ್ಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇದು ಹೀಗೆ ಮುಂದುವರಿಯಲಿ ಎಂದು ಹೇಳಿದರು.
ವಲಯ 9ರ ವಲಯ ಸೇನಾನಿ ಮಮತಾ ಪಾಟೀಲ್ ಮಾತನಾಡಿ, ರಾಯಲ್ ಕ್ಲಬ್‌ನ ಈ ವರ್ಷದ ಅಧ್ಯಕ್ಷರಾಗಿದ್ದ ಬಿ.ಕೆ. ಟೈಮ್ಸ್ ಗಂಗಾಧರ್ ನೇತೃತ್ವದಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳು ಮೂಡಿಬಂದವು. ಅವರು ರೋಟರಿ ಕ್ಲಬ್‌ನ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಅವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದ್ದು, ವಿಶೇಷವಾಗಿತ್ತು. ಅವರ ಸಾಮಾಜಿಕ ಕಾರ್ಯಗಳು ಮುಂಬರುವ ದಿನಗಳಲ್ಲಿ ಹೀಗೆ ಇರಲಿ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ರಾಯಲ್ ಕ್ಲಬ್‌ನ ಅಧ್ಯಕ್ಷ ಬಿ.ಕೆ.ಟೈಮ್ಸ್ ಗಂಗಾಧರ್ ಮಾತನಾಡಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ರೋಟರಿ ಸಂಸ್ಥೆ ಅತ್ಯಂತ ಉತ್ತಮ ವೇದಿಕೆಯಾಗಿದೆ. ರಾಯಲ್ ಕ್ಲಬ್‌ನ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಹಕಾರ ಪಡೆದು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದೊಂದಿಗೆ ರೋಟರಿಗೆ ಒಂದಿಷ್ಟು ಸಮಯ ನೀಡಿ ಅದರಲ್ಲಿ ಕೆಲಸ ಮಾಡಿದರೆ ಸಮಾಜದಲ್ಲಿರುವ ಕೆಲವು ತೊಡಕುಗಳನ್ನು ನಿವಾರಣೆ ಮಾಡಬಹುದು ಎಂದು ತಿಳಿಸಿದರು.
ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಕಾರ್ಯದರ್ಶಿ ಪಿ.ರವಿಕುಮಾರ್, ಖಜಾಂಚಿ ಎಚ್.ಕೆ.ದಿಲೀಪ್ ಕುಮಾರ್ ಇತರರಿದ್ದರು.