ತಾಲೂಕಿನ ಬೆಣ್ಣೂರು ಗ್ರಾಮದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಾಸಕ ಎಚ್.ಕೆ.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಪ್ರಶಾಂತ್, ಶಂಕರ್, ಮಲ್ಲೇಗೌಡ್ರು ಇತರರಿದ್ದರು.  
ಹಾಸನ

ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್
  • 40 ಲಕ್ಷ ರೂ., ಅನುದಾನದಲ್ಲಿ ಕಾಮಗಾರಿ ಭೂಮಿ ಪೂಜೆ
ಬೇಲೂರು: ಯಗಚಿ ಜಲಾಶಯದ ಹಿನ್ನೀರಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ, ಚಿಕ್ಕಮಗಳೂರು ಗಡಿ ಭಾಗಕ್ಕೆ ಹೊಂದಿ ಕೊಂಡಿರುವ ಬೆಣ್ಣೂರು ರಸ್ತೆಗೆ 40 ಲಕ್ಷ ರೂ., ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಬೆಣ್ಣೂರು ಗ್ರಾಮದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯಡಿ 40 ಲಕ್ಷ ರೂ, ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಯಗಚಿ ಜಲಾಶಯದ ಹಿನ್ನೀರಿನ ಪ್ರದೇಶದ ರಸ್ತೆಗಳು ಗುಂಡಿ ಬಿದ್ದಿದ್ದರಿಂದ ಈ ಭಾಗದ ಜನರ ಓಡಾಟಕ್ಕೆ ಅನಾನೂಕೂಲವಾಗಿತ್ತು. ಈ ಗ್ರಾಮವು ಚಿಕ್ಕಮಗಳುರು ಗಡಿ ಭಾಗಕ್ಕೆ ಹೊಂದಿ ಕೊಂಡಿರುವುದರಿಂದ ಬೆಣ್ಣೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ದೈನಂದಿನ ಸಂಚಾರಕ್ಕೆ ಇದು ಪ್ರಮುಖ ರಸ್ತೆಯಾಗಿದೆ. ಹಲ್ಮಿಡಿ-ಹೊಸಮನೆಹಳ್ಳಿ ನಡುವಿನ ರಸ್ತೆ ಅಲ್ಲಲ್ಲಿ ಹಾಳಾಗಿದೆ. ಈ ರಸ್ತೆ ದುರಸ್ತಿ ಮಾಡಲು 20 ಲಕ್ಷ ರೂ., ಅನುದಾನ ಬಿಡುಗಡೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆದ್ದು, ಮೊದಲೇ ಜಮೀನಿಗೆ ಸಂಬಂಧಿಸಿದ ಪೈಪುಗಳನ್ನು ರಸ್ತೆ ಮಧ್ಯೆ ರೈತರು ಅಳವಡಿಸಿ ಕೊಂಡರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಬೆಣ್ಣೂರು ರೇಣುಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಮೂಲಸೌಕರ್ಯ ವೃದ್ಧಿ ಹಾಗೂ ಗಡಿ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಇದು ಅತ್ಯಂತ ಶ್ಲಾಘನೀಯ ಹೆಜ್ಜೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೂ ತಮ್ಮ ಸ್ವಂತ ಸಾಮರ್ಥ್ಯದಿಂದ ಅನುದಾನ ತಂದು ತಾಲೂಕನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಲಿದ್ದಾರೆ ಎಂದರು.
ಹಲ್ಮಿಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಪ್ರಶಾಂತ್, ಗ್ರಾಮಸ್ಥರಾದ ಶಂಕರ್, ಮಲ್ಲೇಗೌಡ್ರು, ಮಾದೇವಯ್ಯ, ಮಂಜು, ಪುನೀತ್, ಜಗದೀಶ್, ಪೂರ್ಣೇಶ್, ಮಂಜುನಾಥ್, ಸುಬ್ರಮಣ್ಯ ಗ್ರಾಮಸ್ಥರಿದ್ದರು.