ಚಿತ್ರ:15(ಬಿಎಲ್‌ಆರ್)1-ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ಚಂದ್ರಶೇಖರ್ ಎಂಬುವವರ ಭತ್ತದ ಬಣವೆಗೆ ಬೆಂಕಿ ತಗುಲಿ ಸುಟ್ಟು ಹೋಗಿರುವುದು. 
ಹಾಸನ

ಅಗ್ನಿ ಅವಘಡಕ್ಕೆ ಭತ್ತ ನಾಶ

ರವಿಕುಮಾರ್ ಪಿ. ಕೆ
ಬೇಲೂರು: ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ಇತ್ತೀಚೆಗೆ ಬಣವೆ ಹಾಕಿದ್ದ ಭತ್ತದ ಬೆಳೆಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ. ಗ್ರಾಮದ ರೈತ ಚಂದ್ರಶೇಖರ್ ಎಂಬುವವರ ಬೆಳೆ ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಕಾಣಿಸುತ್ತಿದ್ದಂತೆ ಆಗಮಿಸಿದ ಸ್ಥಳೀಯರು ಬೆಂಕಿ ನಂದಿಸಿ ಅಳಿದುಳಿದ ಬೆಳೆ ರಕ್ಷಿಸಿದ್ದಾರೆ.
ರೈತ ಚಂದ್ರಶೇಖರ್ ಮಾತನಾಡಿ, ನಮ್ಮ ಭಾಗದಲ್ಲಿ ಕಾಡಾನೆಗಳ ಉಪಟಳವಿದ್ದರೂ ಜಮೀನನ್ನು ಹಾಳು ಬಿಡದೆ ಕಷ್ಟಪಟ್ಟು ವರ್ಷಪೂರ್ತಿ ಎರಡು ಎಕರೆ ಜಮೀನಿನಲ್ಲಿ ಭತ್ತದ ಬೆಳೆದು ಕೊಯ್ಲು ಮಾಡಿ ಕೆಲ ದಿನಗಳ ನಂತರ ಒಕ್ಕಣೆ ಮಾಡಲು ಬಣವೆ ಇಟ್ಟಿದ್ದೆ. ಕಷ್ಟು ಪಟ್ಟು ಬೆಳೆದ ಭತ್ತ ಇದೀಗ ಸುಟ್ಟು ಭಸ್ಮವಾಗಿದೆ ಎಂದು ಅಳಲು ತೋಡಿಕೊಂಡರು.