ಹಾಸನ ಜಿಲ್ಲೆಯ ಅರ್ಚಕರ ಸಂಘದ ವತಿಯಿಂದ ನೊಣವಿನಕೆರೆ ಶ್ರೀಗಳನ್ನು ಭೇಟಿ ಮಾಡಿ ಕುಂದು ಕೊರತೆಗಳ ಬಗ್ಗೆ ಮನವಿ ಸಲ್ಲಿಸಲಾಯಿತು. ಸೋಮಶೇಖರ್, ಶ್ರೀಧರ್, ಸತ್ಯನಾರಾಯಣ, ನಾಗೇಂದ್ರ ಇತರರು ಇದ್ದರು.  
ಹಾಸನ

ಅರ್ಚಕರ ಕುಂದುಕೊರತೆ ಪರಿಹಾರಕ್ಕಾಗಿ ನಿವೇದನೆ

ಪ್ರಮುಖ ಮುಖ್ಯಾಂಶಗಳು

  • ನೊಣವಿನಕೆರೆ ಶ್ರೀಗಳನ್ನು ಭೇಟಿ ಮಾಡಿದ ನಿಯೋಗ
  • ಸಿಎಂ ಗಮನಕ್ಕೆ ತರಲು ಮನವಿ
ಅರಸೀಕೆರೆ ಗ್ರಾಮಾಂತರ: ಹಾಸನ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ ಒಕ್ಕೂಟದ ನಿಯೋಗ ನೊಣವಿನಕೆರೆ ಶ್ರೀ ಕಾಡು ಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭೇಂದ್ರ ಶಿವಯೋಗೀಶ್ವರ ಸ್ವಾಮೀಜಿಯನ್ನು ಗುರುವಾರ ಭೇಟಿಯಾಗಿ ಮುಜರಾಯಿ ದೇವಾಲಯಗಳ ಅರ್ಚಕರ ಕುಂದುಕೊರತೆಗಳ ಬಗ್ಗೆ ವಿವರಿಸಿ ಶ್ರೀಗಳಿಗೆ ಫಲ ಸಮರ್ಪಿಸಿ ಆಶೀರ್ವಾದ ಪಡೆಯಿತು.
ಹಾಸನ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕ ಸಂಘದ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 35,000 ದೇಗುಲಗಳು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ಸಿ ವರ್ಗದ ದೇವಾಲಯಗಳು ಇದ್ದು ದೇವಾಲಯಗಳಿಗೆ ವಾರ್ಷಿಕ ತಸ್ತಿಕ್ ಹಣ ಬಹಳ ಕಡಿಮೆ ಇದೆ. ಮಾಸಿಕ 10 ಸಾವಿರ ರೂ. ಹೆಚ್ಚಿಗೆ ಮಾಡಿಸಿಕೊಡಲು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ತಸ್ತಿಕ್ ಹಣ ಹೆಚ್ಚಿಗೆ ಮಾಡಿಸಿ ಕೊಡುವಂತೆ ಗುರುಗಳಿಗೆ ಮನವಿ ಮಾಡಿದರು.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಉಪಾದಿವಂತರ ಒಕ್ಕೂಟದ ಹಾಸನ ಜಿಲ್ಲಾ ಅಧ್ಯಕ್ಷ ಹಾರನಹಳ್ಳಿ ನಾಗೇಂದ್ರ, ಚನ್ನರಾಯಪಟ್ಟಣ ಅರ್ಚಕ ಸಂಘದ ಶ್ರೀಧರ್‌ಮೂರ್ತಿ, ಆರಾಧ್ಯ, ಬೆಟ್ಟದಪುರ ಸತ್ಯನಾರಾಯಣ, ಹಾಸನ ಜಿಲ್ಲೆಯ ವಿವಿಧ ದೇವಾಲಯಗಳ ಅರ್ಚಕರು ನಿಯೋಗದಲ್ಲಿ ಇದ್ದರು.