ಬಾಣಾವರ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. 
ಹಾಸನ

ಬಾಣಾವರದಲ್ಲಿ ರಂಜಾನ್ ಆಚರಣೆ

ಅರಸೀಕೆರೆ ಗ್ರಾಮಂತರ: ತಾಲೂಕಿನ ಬಾಣಾವರ ಪಟ್ಟಣದ ಪೇಟೆ ಮತ್ತು ಕೋಟೆ ಬಡಾವಣೆಯಲ್ಲಿರುವ ಮುಸ್ಲಿಮರು ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿ ಯಿಂದ ಆಚರಿಸಿದರು.
ಸುನ್ನಿ ಜಾಮಿಯಾ ಮಸೀದಿಯಿಂದ ಮೆರವಣಿಗೆ ಹೊರಟು ಹುಳಿಯಾರು ರಸ್ತೆ ಮಾರ್ಗವಾಗಿ ಜಾವಗಲ್ ರಸ್ತೆಯಲ್ಲಿರುವ ಈದ್ಗಾ ಮೈದಾನ ತಲುಪಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಧರ್ಮಗುರು ಸಲೀಮ್ ರಾಜಾ ಮಾತನಾಡಿ, ರಂಜಾನ್ ಹಬ್ಬವು ತ್ಯಾಗ, ಶಾಂತಿ, ಸಹಬಾಳ್ವೆ ಸಾರುವ ಹಬ್ಬವಾಗಿದೆ. ಮುಸ್ಲಿಮರು ಒಂದು ತಿಂಗಳು ಉಪವಾಸ ಮಾಡಿ ಸಮಾಜದ ಅಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುತ್ತಾರೆ. ಭಾರತ ವಿವಿಧತೆಯಲ್ಲಿ ಏಕತೆ ಸಾರಿದ ದೇಶವಾಗಿದ್ದು ದೇಶದ ಏಕತೆಯ ಸಮಗ್ರತೆ ಹಾಗೂ ಅಖಂಡತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದರು.
ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷ ಸೈಯದ್ ರಹಿಂಸಾಬ್, ಕಾರ್ಯದರ್ಶಿ ಶರಫಾನ್, ಖಜಾಂಚಿ ಶಬ್ಬೀರ್, ಜಮಾತ್ ಕಮಿಟಿಯ ಪದಾಧಿಕಾರಿಗಳಾದ ಗೌಸ್ ಪೀರ್, ಸಮಿವುಲ್ಲಾ, ಮನ್ಸೂರ್, ಇಮ್ರಾನ್, ವಸೀಮ್, ಪರ್ವೀಜ್,ಆದಿಲ್, ಮುಸ್ಲಿಂ ಜಮಾತ್ ಕಮಿಟಿಯ ಮಾಜಿ ಅಧ್ಯಕ್ಷರಾದ ಕೆ.ಸಿ.ಖಾದರ್ ಬಾಷಾ ಸಾಬ್, ಶಫಿ ಅಹಮದ್ ಸಾಬ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಯ್ಯದ ಆಸಿಫ್, ಇಂತಿಯಾಜ್, ಮೋಮಿನ, ವಜೀರ್, ಮುಖಂಡರಾದ ಪ್ಯಾರು ಸಾಹೇಬ್, ಮೊಹಮ್ಮದ್ ಇಲಿಯಾಜ್ ಸಾಬ್, ಬಾಣಾವರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಆರಿಫ್ ಜಾನ್ ಸಾಬ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಮಾಜಿ ನಿರ್ದೇಶಕ ಸಮಿವುಲ್ಲಾ ಷರೀಫ್ ಭಾಗವಹಿಸಿದ್ದರು.