ಅರಕಲಗೂಡು ದಿನವಹಿ ಮಾರುಕಟ್ಟೆ ಪ್ರದೇಶದಲ್ಲಿ ಬುಧವಾರ ಬಿದ್ದ ಮಳೆಗೆ ವ್ಯಾಪಾರ ಸ್ತಬ್ಧಗೊಂಡಿತ್ತು. 
ಹಾಸನ

ಆಲಿಕಲ್ಲು ಸಹಿತ ಭಾರಿ ಮಳೆ

ಲಲಾಟಾಕ್ಷ ಎಸ್
ಅರಕಲಗೂಡು: ತಾಲೂಕಿನ ಹಲವೆಡೆ ಬುಧವಾರ ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯಿತು.
ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ಸಾಧರಣವಾಗಿ ಮಳೆಯಾಗಿತ್ತು. ಬುಧವಾರ ಮಧ್ಯಾಹ್ನ ಕೆಲವೆಡೆ ಜೋರಾಗಿ ಅಬ್ಬರಿಸಿತು. ಕೊಣನೂರು ಮತ್ತು ಅರಕಲಗೂಡು ಪಟ್ಟಣ ಸುತ್ತಮುತ್ತ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶುರುವಾದ ಮಳೆ ಕೆಲಕಾಲ ಮಿಂಚು ಗುಡುಗು ಸಹಿತ ಸುರಿಯಿತು.
ಮಳೆಯಿಂದಾಗಿ ಕೊಣನೂರು ಮತ್ತು ಅರಕಲಗೂಡಿನಲ್ಲಿ ದಿನವಹಿ ಮಾರುಕಟ್ಟೆ ಪ್ರದೇಶಗಳಲ್ಲಿ ಹಬ್ಬದ ವಸ್ತುಗಳನ್ನು ಕೊಳ್ಳಲು ಬಂದಿದ್ದ ಜನರು, ವ್ಯಾಪಾರಿಗಳು ಪರದಾಡಿದರು. ಮಳೆ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಯಿತು.