ಚನ್ನರಾಯಪಟ್ಟಣ ತಾಲ್ಲೂಕು ದಂಡಿನಗಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಿಗೆ 2.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಭೂಮಿ ಪೂಜೆ ನೆರವೇರಿಸಿದರು.ಆನೇಕೆರೆ ಬಾಲಚಂದ್ರ, ಹೊನ್ನಶೆಟ್ಟಿಹಳ್ಳಿ ನಾಗರಾಜು,ಕೆ.ಜೆ.ಸುರೇಶ್ ಇತರರಿದ್ದರು.
- ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿಕೆ
ಚನ್ನರಾಯಪಟ್ಟಣ: ದಂಡಿಗನಹಳ್ಳಿ ಹೋಬಳಿಯ 10 ಗ್ರಾಮಗಳಿಗೆ 2.5 ಕೋಟಿ ರೂ., ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಪೂಜೆ ಸಲ್ಲಿಸಲಾಗಿದ್ದು, ಗುತ್ತೀಗೆದಾರರು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದರು.
ತಾಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿ ಮೊದಲ ಹಂತದಲ್ಲಿ ಕೈಗೊಳ್ಳಲಾಗಿರುವ 2.5 ಕೋಟಿ ವೆಚ್ಚದ ರಸ್ತೆ, ಚರಂಡಿ ನಿರ್ಮಾಣಕ್ಕೆ ಇತ್ತೀಚೆಗೆ ಹಲವು ಗ್ರಾಮಗಳಲ್ಲಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ಶಾಸಕರಿಗೆ ಹಂಚಿಕೆ ಮಾಡಿರುವ ಅನುದಾನದಡಿ ರಸ್ತೆ, ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹೋಬಳಿಯ ಎನ್.ಬಿಂಡೇನಹಳ್ಳಿ, ಹೊನ್ನಶೆಟ್ಟಿಹಳ್ಳಿ, ಆಗ್ರಹಾರ, ಎ.ಚೋಳೆನಹಳ್ಳಿ, ನಾರಾಯಣಪುರ, ನಾಡನಹಳ್ಳಿ, ಪಿಳ್ಳಳ್ಳಿ, ಚನ್ನಾಪುರ, ಗೆಜ್ಜಗಾರನಹಳ್ಳಿ ಮತ್ತು ಆನೇಕೆರೆ ಗ್ರಾಮಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಷ್ಟು ರಸ್ತೆ ಮಾಡಿದೆವು ಅನ್ನುವುದಕ್ಕಿಂತ ಅಗತ್ಯವಿರುವ, ಜನರಿಗೆ ಹೆಚ್ಚು ಅನುಕೂಲವಾಗುವ ರಸ್ತೆ ನಿರ್ಮಾಣ ಮಾಡುವುದು ಮುಖ್ಯವಾಗುತ್ತದೆ ಎಂದರು.
ಪ್ರತಿ ಕಾಮಗಾರಿಗೆ 10 ರಿಂದ 15 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಗುಣಮಟ್ಟದ ಕಾಮಗಾರಿಗೆ ಸೂಚಿಸಲಾಗಿದೆ ಎಂದರು.
ಮುಖಂಡರಾದ ಆನೇಕೆರೆ ಬಾಲಚಂದ್ರ, ಹೊನ್ನಶೆಟ್ಟಿಹಳ್ಳಿ ನಾಗರಾಜು,ಕೆ.ಜೆ.ಸುರೇಶ್, ಪುಟ್ಟಪ್ಪ, ಲಕ್ಕೇಗೌಡ, ಪ್ರಭ, ದಿನೇಶ್, ಸೋಮಶೇಖರ,ಚಂದ್ರಣ್ಣ ಸೇರಿ ಇತರರು ಇದ್ದರು.