ಹಾಸನ ತಾಲೂಕಿನ ಬೀಕನಹಳ್ಳಿ ಗ್ರಾಮದ ಶ್ರೀ ಪುರದಮ್ಮ ದೇವಿಯ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. 
ಹಾಸನ

ಬೀಕನಹಳ್ಳಿಯ ಪುರದಮ್ಮ ಜಾತ್ರೆ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಬೀಕನಹಳ್ಳಿಯ ಪುರದಮ್ಮ ಜಾತ್ರೆ ಸಂಭ್ರಮ
  • ಹಲವು ಗಣ್ಯರು ಭಾಗಿ
ಹಾಸನ: ತಾಲೂಕಿನ ಬೀಕನಹಳ್ಳಿ ಗ್ರಾಮದ ಶ್ರೀ ಪುರದಮ್ಮ ದೇವಿಯ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ.ಸ್ವರೂಪ್ ಸೇರಿ ಹಲವು ಗಣ್ಯರು ಭಾಗವಹಿಸಿ ದೇವಿಯ ದರ್ಶನ ಪಡೆದರು.
ರಥೋತ್ಸವದಲ್ಲಿ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು, ಪುರದಮ್ಮ ದೇವಿಯ ಆರಾಧಕರು ಭಾಗಿಯಾಗಿ ಅಲಂಕೃತ ರಥ ಎಳೆದು ಸಂಭ್ರಮಿಸಿದರು. ಜಾತ್ರೆಯ ಮೊದಲ ದಿನವಾದ ಗುರುವಾರ ಮುಂಜಾನೆ 5 ಗಂಟೆಗೆ ಶ್ರೀ ರಾಮದೇವರ ಹಳ್ಳದಿಂದ ಅಡ್ಡಪಲ್ಲಕ್ಕಿ ಉತ್ಸವದ ಮೂಲಕ ಗಂಗೆ ತರಲಾಯಿತು.
2ನೇ ದಿನವಾದ ಶುಕ್ರವಾರ ಮುಂಜಾನೆ 4 ರಿಂದ 5 ಗಂಟೆ ವೇಳೆಗೆ ಶ್ರೀ ಚೌಡೇಶ್ವರಿ-ಪುರದಮ್ಮ ಅವರಿಗೆ ಪೂಜಾ ಕಾರ್ಯಕ್ರಮ ಕೈಗೊಂಡು, ಬೆಳಗ್ಗೆ 8 ರಿಂದ 9 ಗಂಟೆ ವೇಳೆಗೆ ರಥೋತ್ಸವ ದೇವಾಲಯದ ಆವರಣದಿಂದ ಬೀಕನಹಳ್ಳಿ ಗ್ರಾಮದೊಳಗೆ ಸಾಗಿತು. ಸಂಜೆ 7 ಗಂಟೆಗೆ ಉತ್ಸವ ಮೂರ್ತಿಯ ಮೆರವಣಿಗೆ ದೇವಾಲಯ ಆವರಣದಿಂದ ಸೊಪ್ಪಿನಹಳ್ಳಿ ಗ್ರಾಮದವರೆಗೆ ನಡೆಯಿತು.
ದೇವಾಲಯ ಆಡಳಿತಾಕಾರಿಗಳಾದ ಯು.ಎಂ. ಪ್ರಕಾಶ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ದರ್ಶನ್, ಪಿಎಸ್‌ಐ ಕುಮಾರ್, ಯಲಗುಂದ ಪಿಡಿಒ ವೇಣುಗೋಪಾಲ್, ಪಂಚಾಯಿತಿ ಅಭಿವೃದ್ಧಿ ಅಕಾರಿ ಯಶಸ್ವಿನಿ, ಆರ್‌ಐ ಯತೀಶ್, ಮುಖಂಡರಾದ ಶಾಂತಾರಾಜೇಗೌಡ, ನಾರಾಯಣಗೌಡ, ಶಿವಣ್ಣ, ಸುನಿಲ್ ಪ್ರಕಾಶ್, ಬ್ಯಾಂಕ್ ವ್ಯವಸ್ಥಾಪಕರಾದ ಸೋಮಶೇಖರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಇಲಾಖಾ ಸಿಬ್ಬಂದಿ, ಗ್ರಾಮಸ್ಥರು ಇದ್ದರು.