ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗದ ವತಿಯಿಂದ ಆಚರಿಸಲಾಯಿತು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸೀಗೆಕೊಪ್ಪಲು ಮಂಜುನಾಥ್, ಎಂ. ರಘು, ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷ ಮಹೇಶ್, ಹೊನ್ನೇನಹಳ್ಳಿ ಶಶಿಕುಮಾರ್ ಇತರರು ಇದ್ದರು. 
ಹಾಸನ

ಪುನೀತ್ ವ್ಯಕ್ತಿತ್ವ ನಮಗೆಲ್ಲ ಮಾದರಿ

ಪ್ರಮುಖ ಮುಖ್ಯಾಂಶಗಳು

  • Puneeth rajkumar
ಹಿರೀಸಾವೆ: ಪುನೀತ್ ರಾಜಕುಮಾರ್ ಅವರ ನಡೆ, ನುಡಿ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿತ್ವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಾಹಿತಿ ಡಾ.ಚಂದ್ರು ನಿಂಬೇಹಳ್ಳಿ ಹೇಳಿದರು.
ಪಟ್ಟಣದ ಶ್ರೀಕಂಠಯ್ಯ ವೃತ್ತದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟು ಹಬ್ಬದ ಆಚರಣೆಯಲ್ಲಿ ಮಾತನಾಡಿ, ಮನುಷ್ಯ ಬದುಕಿದ್ದಾಗ ಮಾಡಿದ ಸಮಾಜ ಸೇವೆಯು ಕಾಲದ ನಂತರವೂ ಚಿರವಾಗಿ ಉಳಿಯಲಿದೆ ಎಂಬುದಕ್ಕೆ ಪುನೀತ್ ಬದುಕು ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಚನ್ನರಾಯಪಟ್ಟಣ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಎನ್.ಮಂಜುನಾಥ್ ಮಾತನಾಡಿ, ನಿಷ್ಠಾವಂತ ಜಿಲ್ಲಾಧಿಕಾರಿ, ದಕ್ಷ ಪೊಲೀಸ್ ಅಧಿಕಾರಿ, ಮಾನವೀಯ ಮೌಲ್ಯವುಳ್ಳ ಪಾತ್ರಗಳನ್ನು ಪುನೀತ್ ಮಾಡಿದ್ದಾರೆ. ಆ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಿದ್ದಾರೆ. ಇಂತಹ ಮಹಾನ್ ಚೇತನ ನಮಗೆಲ್ಲ ಮಾದರಿ ಎಂದು ತಿಳಿಸಿದರು.
ಮಾನವ ಹಕ್ಕುಗಳ ತನಿಖಾ ಸಮಿತಿಯ ತಾಲೂಕು ಕಾರ್ಯದರ್ಶಿ ಎಂ.ಜಿ.ನಂಜೇಗೌಡ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ತಂದೆಯ ಹಾದಿಯಲ್ಲಿಯೇ ಸಾಗಿದವರು. ನಟನೆಯಲ್ಲಿ ಸೈ ಎನ್ನಿಸಿಕೊಂಡವರು. ಕಷ್ಟದಲ್ಲಿ ಇರುವವರಿಗೆ ನೆರವಾಗುವ ಮೂಲಕ ಸಮಾಜಸೇವೆಯಲ್ಲಿ ಮುಂದಿದ್ದವರು. ಅವರ ಹೆಸರು ಸದಾಕಾಲ ಕನ್ನಡಿಗರ ಮನಸ್ಸಿನಲ್ಲಿ ಉಳಿಯಲಿದೆ ಎಂದರು.
ಅಭಿಮಾನಿಗಳು ಸಾರ್ವಜನಿಕರಿಗೆ ಸಿಹಿ ಹಂಚಿದರು. ಅನ್ನದಾಸೋಹ ವ್ಯವಸ್ಥೆ ಕಲ್ಪಿಸಿದ್ದರು.
ರೈತ ಸಂಘದ ಅಧ್ಯಕ್ಷ ಬಾಲಣ್ಣ, ಮಾನವ ಹಕ್ಕುಗಳ ತನಿಖಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಶಿಕ್ ಗೌಡ, ಪ್ರಗತಿ ವಾಸು,
ಬ್ಯಾಂಗಲ್ ಮಹೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಿರಣ್, ಜಿ.ಪರಮೇಶ್ವರ ಯುವಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮೌರ್ಯ ಹಾಗೂ ಇತರರು ಪಾಲ್ಗೊಂಡಿದ್ದರು.